ನವದೆಹಲಿ: ಮೋದಿ ವಿರುದ್ಧ ಪೋಸ್ಟರ್ ವಾರ್ ನಡೆಸಿದ ಆಮ್ ಆದ್ಮಿ ಸರ್ಕಾರದ ವಿರುದ್ಧ ಇದೀಗ ದಿಲ್ಲಿ ಬಿಜೆಪಿ ಘಟಕ ಭ್ರಷ್ಟಾಚಾರದ ಪೋಸ್ಟರನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದೆ.
“ಆಮ್ ಆದ್ಮಿ ಪಕ್ಷದ ಭ್ರಷ್ಟ ಕಳ್ಳರು ಸದ್ದು ಮಾಡುತ್ತಿದ್ದಾರೆ” ಎಂದು ಪೋಸ್ಟರ್ ನಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರ ಫೋಟೋಗಳನ್ನು ಹಾಕಿ ಟ್ವಿಟರ್ ನಲ್ಲಿ ಪೋಸ್ಟರ್ ರಿಲೀಸ್ ಮಾಡಿದೆ.
ಇದರಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರ ಫೋಟೋಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬರೆದಿದ್ದಾರೆ.
ಮಾ.30 ರಂದು ಆಮ್ ಆದ್ಮಿ ಪಕ್ಷ ಮೋದಿ ಅವರ ಬಗ್ಗೆ 11 ಭಾಷೆಯಲ್ಲಿ ನಾನಾ ಕಡೆ ಪೋಸ್ಟರ್ ಗಳನ್ನು ಹಾಕಿತ್ತು. ಈ ಪೋಸ್ಟರ್ ಗಳಲ್ಲಿ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಬರೆದು ಅಂಟಿಸಲಾಗಿತ್ತು. ಇದಕ್ಕೂ ಮುನ್ನ ಕಳೆದ ತಿಂಗಳು “ಮೋದಿ ಹಟಾವೋ, ದೇಶ್ ಬಚಾವೋ” ಎನ್ನುವ ಪೋಸ್ಟರ್ ನ್ನು ಹಾಕಿತ್ತು.