ಮನೆ ರಾಜಕೀಯ ಭ್ರಷ್ಟಾಚಾರ ಆರೋಪ: ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬನ್ನಿ- ಜೆಡಿಎಸ್ ಶಾಸಕರಿಗೆ ಸುಮಲತಾ ಅಂಬರೀಶ್ ಸವಾಲು

ಭ್ರಷ್ಟಾಚಾರ ಆರೋಪ: ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬನ್ನಿ- ಜೆಡಿಎಸ್ ಶಾಸಕರಿಗೆ ಸುಮಲತಾ ಅಂಬರೀಶ್ ಸವಾಲು

0

ಮಂಡ್ಯ(Mandya):   ಭ್ರಷ್ಟಾಚಾರದ ಕುರಿತು ಅವರ ಬಳಿ ದಾಖಲಾತಿ ಇದ್ಧರೆ ಕೊಡಲಿ. ನಾನು ಚರ್ಚೆಗೆ ಸಿದ್ದಳಿದ್ದೇನೆ. ಬಹಿರಂಗ ಚರ್ಚೆಗೆ ಬನ್ನಿ ಎಂದು ಜೆಡಿಎಸ್ ಶಾಸಕರಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್  ಸವಾಲು ಹಾಕಿದರು.

ತಮ್ಮ ವಿರುದ್ಧ ಜೆಡಿಎಸ್ ಶಾಸಕರು  ಭ್ರಷ್ಟಾಚಾರ ಆರೋಪ ಮಾಡಿರುವ ಕುರಿತು ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್,  ನಾನು ಎಂಪಿ ಸರ್ಟಿಫಿಕೇಟ್ ತರುತ್ತೇನೆ.  ಶಾಸಕರು ಎಂಎಲ್ ಎ ಸರ್ಪಿಟಿಫಿಕೇಟ್ ತರಲಿ ಮೇಲುಕೋಟೆಯಲ್ಲಿ ಆಣೆ ಮಾಡೋಣ. ಯಾರು ನಿಜ ಹೇಳ್ತಾರೆ ಅಂತಾ ಗೊತ್ತಾಗುತ್ತೆ. ಅಂಬರೀಶ್ ಬಗ್ಗೆ ಸುಮ್ಮನೆ ಮಾತನಾಡಬಾರದು  ಅವರ ಕಾಲಿನ ದೂಳಿಗೆ ಸಮನಲ್ಲದವರು ಮಾತನಾಡಬಾರದು . ಮಾನ ಇದ್ದವರ ಮೇಲೆ ಮಾನನಷ್ಟ ಮೊಕದ್ಧಮೆ ಹಾಕಬಹುದು ಮಾನ ಇಲ್ಲದವರ ಮೇಲೆ ಏನು ಹಾಕೋದು..? ಎಂದು ಕಿಡಿಕಾರಿದರು.

ಜೆಡಿಎಸ್ ಶಾಸಕರು ಭ್ರಷ್ಟಚಾರ ನನ್ನಲ್ಲಿದೆ ಎಂದು ಹೇಳ್ತಾರೆ ಜೆಡಿಎಸ್ ಶಾಸಕರ ಬಳಿ ದಾಖಲೆ ಇದ್ರೆ ತನ್ನಿ ಬಹಿರಂಗ ಚರ್ಚೆಗೆ ಬನ್ನಿ. ನಾನು ಬರುತ್ತೇನೆ. ಅಂಬರೀಶ್ ಕುಟುಂಬ ಈ ಜನ್ಮದಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲ. ಆರೋಪ ಮಾಡೋರು ಬೇಲ್ ನಲ್ಲಿ ಹೊರಗೆ ಇದ್ದಾರೆ ಎಂದರು.