ಮನೆ ರಾಜ್ಯ ಸಭಾಪತಿ ಹೊರಟ್ಟಿ ವಿರುದ್ಧ ಭ್ರಷ್ಟಾಚಾರ ಆರೋಪ; ವಿಧಾನ ಪರಿಷತ್ ಕಲಾಪದಲ್ಲಿ ಖಂಡನೆ..!

ಸಭಾಪತಿ ಹೊರಟ್ಟಿ ವಿರುದ್ಧ ಭ್ರಷ್ಟಾಚಾರ ಆರೋಪ; ವಿಧಾನ ಪರಿಷತ್ ಕಲಾಪದಲ್ಲಿ ಖಂಡನೆ..!

0

ಬೆಂಗಳೂರು : ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ವಿಷಯ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಸ್ತಾಪ ಆಯ್ತು. ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ ಮುಗಿದ ಬಳಿಕ ಜೆಡಿಎಸ್ ಸದಸ್ಯರಾಗಿ ಭೋಜೇಗೌಡ ವಿಷಯ ಪ್ರಸ್ತಾಪ ಮಾಡಿದ್ರು. ಸಭಾಪತಿಗಳ ವಿರುದ್ದ ‌ನಾಗರಾಜ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಅವರು ಮಾತಾಡಿರೋ ವಿಡಿಯೋ ಹರಿದಾಡುತ್ತಿವೆ. ಪೀಠಿದ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

ಹೊರಟ್ಟಿ ಅವರು ಆ ಪೀಠದಲ್ಲಿ ಇರೋಕೆ ಅರ್ಹ ಇಲ್ಲ ಅಂತ ಮಾತಾಡಿದ್ದಾರೆ‌. ಹೊರಟ್ಟಿ ರೂಲಿಂಗ್ ಬಗ್ಗೆ ಯಾದವ್ ಮಾತಾಡಿದ್ದಾರೆ. ಸಭಾಪತಿ ಪೀಠಕ್ಕೆ ಗೌರವ ಕೊಡಬೇಕು. ಸದನದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು ಅಂತ ಒತ್ತಾಯ ‌ಮಾಡಿದರು. ಬಳಿಕ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಮಾತಾಡಿ, ಸ್ಪೀಕರ್ ಬಗ್ಗೆಯೂ ಮಾಜಿ ಸ್ಪೀಕರ್ ಒಬ್ಬರು ಆರೋಪ ಮಾಡಿದ್ರು‌. ಆ ವಿಷಯ ಸೇರಿದಂತೆ ಸಭಾಪತಿ ಬಗ್ಗೆಯೂ ಮಾತಾಡೋದು ತಪ್ಪು ಎಂದರು. ಸಿಟಿ ರವಿ ಮಾತಾಡಿ, ಪೀಠ ರೂಲಿಂಗ್ ಕೊಟ್ಟ ಮೇಲೂ ನನಗೆ ಮಾನಸಿಕ ಹಿಂಸೆ ಕೊಟ್ಟಿದ್ದರು. ಹೇಗೆ ಅಧಿಕಾರ ದುರ್ಬಳಕೆ ಆಯ್ತು ಎಲ್ಲರಿಗೂ ಗೊತ್ತು.

ಕಲಾಪ ಪ್ರಾರಂಭ ಅಗೋ ಒಂದು ದಿನ ಮುಂಚೆ ಆ ಶಾಸಕರು ವೀಡಿಯೊ ಮಾಡಿದ್ದಾರೆ. ಆರೋಪ ಇದ್ದರೆ ಅದಕ್ಕೆ ಬೇರೆ ಮಾರ್ಗ ಇವೆ. ಚಾರಿತ್ರ್ಯವಧೆ ಮಾಡೋದು ಸರಿಯಲ್ಲ. ವಿಶ್ವಾಸಾರ್ಹತೆ ಇಲ್ಲದೆ ಹೋದ್ರೆ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಇದೆ. ಆದರೆ, ಪೀಠದ ಬಗ್ಗೆ ಮಾತಾಡೋದು ಸರಿಯಲ್ಲ ಎಂದರು. ಪುಟ್ಟಣ್ಣ ಮಾತಾಡಿ, ಸಭಾಪತಿ ಪೀಠಕ್ಕೆ ಗೌರವ ಇದೆ. ಅದಕ್ಕೆ ಯಾರೇ ಅಪಮಾನ ಮಾಡಿದ್ರು ತಪ್ಪು. ಈ ವಿಷಯ ಚರ್ಚೆ ಬೇಡ. ವಿಪಕ್ಷ ಸದಸ್ಯರು, ಸರ್ಕಾರ ಕೂತು ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಅಂತ ಸಲಹೆ ಕೊಟ್ಟರು.

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾತಾಡೋವಾಗ ಮನೆ ಹೊರಗೆ ಮೆಟ್ಟಿನಲ್ಲಿ ಹೊಡೆದು ಮನೆಯಲ್ಲಿ ಬಂದು ಕಾಲು ಹಿಡಿಯೋ ವ್ಯವಸ್ಥೆ ಬೇಡ ಎಂದರು. ಈ‌ ಪದಕ್ಕೆ ಆಡಳಿತ ಪಕ್ಷದ ಸದಸ್ಯರ ವಿರೋಧ ಮಾಡಿದ್ರು. ಆ ಪದ ತೆಗೆಯುವಂತೆ ಒತ್ತಾಯ ಮಾಡಿದ್ರು. ಪರಿಶೀಲನೆ ಮಾಡೋದಾಗಿ ಉಪ ಸಭಾಪತಿ ತಿಳಿಸಿದರು. ಅಂತಿಮವಾಗಿ ಮಾತಾಡಿದ ಉಪ ಸಭಾಪತಿಗಳು, ಇದು ಮನೆಯ ಸಮಸ್ಯೆ. ಪೀಠದ ಬಗ್ಗೆ ಮಾತಾಡೋದು ಸರಿಯಲ್ಲ. ಆಗಿ ಹೋಗಿದೆ. ಈಗ ಅದರ ಬಗ್ಗೆ ಚರ್ಚೆ ಬೇಡ. ಮುಂದೆ ಹೀಗೆ ಆಗದಂತೆ ನಾವು ನೋಡಿಕೊಳ್ಳೋಣ. ನಾವೆಲ್ಲರು ಸಭೆ ಮಾಡಿ ನಿರ್ಧಾರ ಮಾಡೋಣ ಅಂತ ಚರ್ಚೆಗೆ ಅಂತ್ಯ ಹಾಡಿದರು.