ಮನೆ ಮನೆ ಮದ್ದು ಕೆಮ್ಮು

ಕೆಮ್ಮು

0
xr:d:DAFccJ6bc74:2,j:48214591561,t:23030616

1. ನೆಗಡಿ, ಶೀತ,ಕೆಮ್ಮುಗಳು ಒಂದರ ಹಿಂದೆ ಒಂದು ಬರುವ ರೋಗವಾಗಿರುತ್ತದೆ. ಕೆಮ್ಮು ಹೆಚ್ಚಿದಾಗ 5 ರಿಂದ 15 ಗ್ರೈನ್ ವಿಭೀತಕಿ,ಚೂರ್ಣ ಅಂದರೆ ತಾರೆಕಾಯಿ ಚೂರ್ಣವನ್ನು ಜೇನಿನೊಡನೆ ಸೇವಿಸುತ್ತಾ ಬರಲು ಗುಣವಾಗುವುದು.

Join Our Whatsapp Group

2. ಗಂಟಲಿನಲ್ಲಿ ಸ್ವರವು ಸರಿಯಾಗಿ ಬರದಿದ್ದಾಗ ಈ ಚೂರ್ಣವನ್ನು ಜೇನಿನೊಡನೆ ಸೇವಿಸಬೇಕು.

3. ಕಿವಿ, ಮೂಗು, ಗಂಟಲು ರೋಗದಲ್ಲಿ ತಾರೆಕಾಯಿ ಚೂರ್ಣ ಸೇವಿಸುವುದರಿಂದ ಗುಣವಾಗುವುದು. ಬಿಸಿನೀರನ್ನೇ ಕುಡಿಯಬೇಕು.

4. ದಾಲ್ಚಿ ನ್ನಿಯನ್ನು ಪುಡಿ ಮಾಡಿ ಸೇವಿಸುವುದರಿಂದ ಕಪ್ಪದ ಕೆಮ್ಮು,ದಮ್ಮು,ಸ್ವರಭೇದ,ಮುಖದ ಮೊಡವೆಗಳು ಗುಣವಾಗುತ್ತವೆ.

5. ತುರುಚಿನ ಗಿಡದ ಚೂರ್ಣವನ್ನು ಜೇನುತುಪ್ಪದಲ್ಲಿ ಸೇವಿಸುವುದರಿಂದ ವಿಷಮಜ್ಜರ,ಬಾಯಾರಿಕೆ, ವಾಂತಿ, ಪಿತ್ತರತ್ತ, ಕಪ್ಪ, ಮೇದೋರೋಗ ಮದ, ಭ್ರಮಾ ವಿಸರ್ಪ ಏಕರಕ್ತ ಕೆಮ್ಮು,ಇವುಗಳನ್ನು ನಿವಾರಿಸುವುದು.

6. ಎಲೆ ಬದನೇಕಾಯಿಯನ್ನು ಬೇಯಿಸಿ ಆಹಾರದಲ್ಲಿ ತಿಂದರೆ ಕಪ್ಪ ಕರಗಿ ಹೋಗುವುದು.

7. ದೊಡ್ಡಪತ್ರೆಯನ್ನು ಒಣಗಿಸಿ, ಪುಡಿ ಮಾಡಿ ಅದಕ್ಕೆ ಹುಣಸೆಹಣ್ಣು, ಮೆಣಸು,ಸೈಂದವ ಲವಣ ಸೇರಿಸಿ ಚಟ್ನಿಪುಡಿಯಂತೆ ಮಾಡಿ ಮೊದಲ ಅನ್ನಕ್ಕೆ ಎರಡು ಚಮಚ ಹಾಕಿ ಸೇವಿಸುತ್ತಾ ಬಂದರೆ,ಕೆಮ್ಮು,ದಮ್ಮು ಹೊಟ್ಟೆಯಲ್ಲಿ ಆಗುವ ಉರಿ, ಉಬ್ಬಸ,ಉನ್ಮಾದ ಗುಣವಾಗುವುದು.

8. ದೊಡ್ಡಪತ್ರೆ ಚಟ್ನಿ ಗೆ ಬೆಳ್ಳುಳ್ಳಿ ಸೇರಿಸಿ ಸೇವಿಸಲು ಕೆಮ್ಮು ನಿವಾರಣೆಯಾಗುವುದು.

9. ಕಾಳುಮೆಣಸಿನ ಜೊತೆಯಲ್ಲಿ ದಾಲ್ಚಿನ್ನಿ ಸೇರಿಸಿ ಕುಟ್ಟಿ ಪುಡಿ ಮಾಡಿ ಜೇನುತುಪ್ಪದಲ್ಲಿ ಸೇವಿಸಲು ಗೂರಲು ಕೆಮ್ಮು,ಕಫ ನಿವಾರಣೆ ಆಗುವುದು.

10. ಪ್ರತಿದಿನವೂ ಒಂದೊಂದು ಸೇಬು ತಿನ್ನುವುದರಿಂದ ಕಫ ನಿವಾರಣೆ ಆಗುತ್ತದೆ.

11. ಮಕ್ಕಳ ಕೆಮ್ಮು ಮತ್ತು ಪಕ್ಕೆ ಸೆಳೆತಗಳಲ್ಲಿ ಕತ್ತೆ ಹಾಲಿಗೆ ಸಕ್ಕರೆ ಬೆರೆಸಿ, ಕುಡಿಸಿದರೆ ಗುಣವಾಗುತ್ತದೆ.

12. ತುಳಸೀ ರಸಕ್ಕೆ ಜೇನು ಬೆರೆಸಿ, ಮಕ್ಕಳಾದಿಯಾಗಿ ದೊಡ್ಡವರೂ ಸೇವಿಸಿದರೆ ಕೆಮ್ಮು ನಿವಾರಣೆಯಾಗುವುದು.ಮಕ್ಕಳಿಗೆ ಜ್ವರ ಬಂದಾಗಲೂ ತುಳಸೀ ರಸವನ್ನು ಜೇನು ಸೇರಿಸಿ ಕುಡಿಸಿದರೆ ಗುಣ ಕಂಡುಬರುವುದು.

13. ಹಸಿ ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿ ಆಗಿಯುತ್ತಾ ನೀರು ಕುಡಿಯುತ್ತಿದ್ದರೆ ಕೆಮ್ಮು ಗುಣವಾಗುವುದು.

14. ಒಂದು ಇಡೀ ಮೆಂತ್ಯದ ಸೊಪ್ಪಿನ ಕಷಾಯ ಮಾಡಿ ಅದರಲ್ಲಿ ಹಸಿ ಶುಂಠಿಯ ರಸವನ್ನು ಹಾಕಿ ಜೇನುತುಪ್ಪದೊಂದಿಗೆ ಸೇವಿಸಲು ಕಫ

 ನಿವಾರಣೆ ಆಗುವುದು .

15. ಮಜ್ಜಿಗೆಗೆ ಅನ್ನ ಮೊಸರನ್ನ ಗಳಿಗೆ ಈರುಳ್ಳಿ ಸೇರಿಕೊಂಡು ತಿನ್ನುತ್ತಾ ಬಂದರೆ ಕೆಮ್ಮು ನಿವಾರಣೆ ಆಗುವುದು.

16. ದೀರ್ಘಕಾಲದ ಕೆಮ್ಮಿಗೆ ಲವಂಗಕ್ಕೆ ಉಪ್ಪು ಸೇರಿಸಿ ನೀರನ್ನು ನುಂಗುತ್ತಾ ಇದ್ದರೆ ಗುಣವಾಗುವುದು.

17. ಮಕ್ಕಳ ನಾಯಿ ಕೆಮ್ಮಿಗೆ ಶ್ರೀಗಂಧವನ್ನು ತೇದು ಜೇನಿನೊಂದಿಗೆ ಕುಡಿಸಲು ಕೆಮ್ಮು ಗುಣವಾಗುವುದು.

18. ಕೆಮ್ಮು ನೆಗಡಿ ಜೊತೆಯಲ್ಲೇ ಬರುವಾಗ ಒಂದು ಚಮಚ ಅರಿಶಿನ ಪುಡಿಗೆ ಅದರಷ್ಟೇ ಕರಿಮೆಣಸಿನಪುಡಿ ಬೆರೆಸಿ ಹಾಲಿನಲ್ಲಿ ಸೇವಿಸಲು ಕೆಮ್ಮು ನಿಂತು ಹೋಗುವುದು.

19. ಅಳಲೇಕಾಯಿಯ ಚೂರ್ಣವನ್ನು ಜೇನಿನಲ್ಲಿ ಸೇವಿಸಲು ಒಣಕೆಮ್ಮು ಗುಣವಾಗುವುದು.

20. ಜೇನುತುಪ್ಪದಲ್ಲಿ ಶುಂಠಿ ರಸ,ಈರುಳ್ಳಿ ರಸ, ತುಳಸೀ ರಸ,ಹೂವುಗಳನ್ನು ಸೇರಿಸಿ,ಕುಡಿಯುವುದರಿಂದ ಕೆಮ್ಮು ನಿವಾರಣೆ ಆಗುವುದು.

21. ತುಳಸಿ, ಬೆಳ್ಳುಳ್ಳಿ, ಹಸಿ ಶುಂಠಿ,ಜೇನು ಸೇರಿಸಿ ಸೇವಿಸುತ್ತಾ ಇದ್ದರ ಕೆಮ್ಮುಗುಣವಾಗುವುದು.

22. ಕಫವನ್ನು ನಿಲ್ಲಿಸಲು ಬರಿ ಹೊಟ್ಟೆಯಲ್ಲಿ ಮುಸುಕಿನ ಜೋಳದ ಹಿಟ್ಟಿನ ಪಾನಕ ಮಾಡಿ ಸೇವಿಸಬೇಕು.

23. ಊಟದಲ್ಲಿ ಗೋಣಿಸೊಪ್ಪನ್ನು ಪಲ್ಯ, ಸಾರು, ಹುಳಿ,ಗೊಜ್ಜುಗಳನ್ನು ಮಾಡಿ ಸೇವಿಸಿದರೆ ಕೆಮ್ಮು ಕಪಫ ಗುಣವಾಗುತ್ತದೆ.

24. ಹುರುಳಿಕಾಳನ್ನು ಬೇಯಿಸಿ ಆ ಕಟ್ಟನ್ನು ನೀರಿಗೆ ಬದಲಾಗಿ ಕುಡಿಯುತ್ತಿದ್ದರೆ ಕೆಮ್ಮು ಕಫ ನೀರಾಗಿ ಗುಣವಾಗುತ್ತದೆ.

25. ಬೆಲ್ಲದ ಹಣ್ಣನ್ನು ಬೆಲ್ಲದ ಸಹಿತ ಸೇವಿಸಲು ಕೆಮ್ಮು ಮಾಯವಾಗುವುದು.

26. ವೀಳ್ಯದೆಲೆಯ ಜೊತೆಯಲ್ಲಿ ಕಪ್ಪು ಮೆಣಸು, ಕರಿತುಳಿಸಿ, ಲವಂಗವನ್ನು ಕುಟ್ಟಿ ಇಟ್ಟುಕೊಂಡಾಗ ಆಗಾಗ ಸೇವಿಸುತ್ತಿದ್ದರೆ ಕಫ ನೀರಾಗಿ ಕೆಮ್ಮು ನಿವಾರಣೆ ಆಗುವುದು.

27. ಸುವರ್ಣ ಗಡ್ಡೆಯ ಚೂರ್ಣವನ್ನು ಹಾಲಿನಲ್ಲಾಗಲ್ಲೀ ಬಿಸಿ ನೀರಿನಲ್ಲಾಗಲಿ ಸೇವಿಸುತ್ತಾ ಬಂದರೆ ಕೆಮ್ಮು,ದಮ್ಮು ಶುಕ್ರ ದೌರ್ಬಲ್ಯ, ಮುಟ್ಟಿನ ದೋಷ ನಿವಾರಣೆ ಆಗುವುದು.

28. ಗಜ್ಜರಿಯನ್ನು ಪ್ರತಿದಿನವೂ ಸೇವಿಸುತ್ತಾ ಬಂದರೆ ಕೆಮ್ಮು, ಶೀತ, ನೆಗಡಿ ಬರದಂತೆ ರಕ್ಷಣೆ ಕೊಡುತ್ತದೆ.

29. ಮೆಂತ್ಯ ಮತ್ತು ಸಮ ಪ್ರಮಾಣ ಓಮ ಎರಡನ್ನೂ ಸೇರಿಸಿ ಕಷಾಯ ಮಾಡಿ ಹಸಿರು ಶುಂಠಿ ರಸ,ಒಂದು ಚಮಚ ಹಾಕಿ, ಜೇನು ಸೇರಿಸಿ ಪಾನ ಮಾಡುವುದರಿಂದ ಕಫ ಕೆಮ್ಮು ಗುಣವಾಗುವುದು.

30. ಆಲಿಗೆ ಅರಿಶಿನ,ಕರಿಮೆಣಸಿನ ಕಾಳಿನ ಚೂರ್ಣ ಬೆರೆಸಿ, ಬಿಸಿ ಮಾಡಿ ಕುಡಿಯುವುದರಿಂದ ಹಾಗೂ ಮೆಣಸಿನ ಸಾರು ಮಾಡಿ ಕುಡಿಯುವುದರಿಂದ ಕೆಮ್ಮು ದಮ್ಮು ನಿವಾರಣೆ ಆಗುವುದು. 31.  ಅಸಾಧ್ಯ ಕೆಮ್ಮಿಗೆ ಒಂದು ತೋಳ ಹಿಪ್ಪಲಿ, ಅರ್ಧ ತೊಲ ದಾಳಿಂಬೆ ಸಿಪ್ಪೆ, ಒಂದು ತೊಲ ಬೆಲ್ಲ, ಎರಡು ತೋಳ ಯವಕ್ಷಾರಗಳ ಮಾಡಿ ಹೊತ್ತಿಗೆ ಅರ್ಧ ತೋಲದಂತೆ ಸೇವಿಸುತ್ತಾ ಬಿಸಿ ನೀರು ಕುಡಿಯುತ್ತಾ ಬಂದರೆ ಗುಣವಾಗುವುದು.