1. ಇದು ಕ್ಷಯದ ಲಕ್ಷಣಗಳು. ದ್ರಾಕ್ಷಾ ರಸದೊಂದಿಗೆ ಹಾಲನ್ನು ಕೊಡಬೇಕು. ಬೆನ್ನು ಹುರಿಗೆ ಬಿಸಿನೀರಿನ ಶಾಖ ಕೊಡಬೇಕು. ಆಡಿನ ಹಾಲು ಉತ್ತಮ ಹುಳಿ ದ್ರವವನ್ನು ಸೇವಿಸಬಹುದು. ನಿಂಬೇ ಹಣ್ಣಿನ ರಸ ಸೇವಿಸಬೇಕು.
2. ಅರಗಿನ ಚೂರ್ಣವನ್ನು ಅರಗಿನ ಕಷಾಯದಲ್ಲಿ ಸೇವಿಸಲು ರಕ್ತ ಬೀಳುವುದು ಕಡಿಮೆಯಾಗುವುದು.
3. ಉತ್ತರಣಿಯ ಎಲೆಯ ಸ್ವರಶವನ್ನು ಎಳೆನೀರಿನಲ್ಲಿ ಕುಡಿಸುವುದರಿಂದ ಗುಣವಾಗುತ್ತದೆ.
ಕಟವಾತ (ಸೊಂಟ ನೋವು) :-
1. ನಗ್ಗಿಲು ಮುಳ್ಳನು ತಂದು, ಅದನ್ನು ಕಷಾಯವಿಟ್ಟು ಸಕ್ಕರೆ ಬೆರೆಸಿ ಪಾನ ಮಾಡಬೇಕು.
2. ಸಾಸಿವೆ ಪಟ್ಟು ಹಾಕಬಹುದು ಕರ್ಪೂರ ತೈಲದಿಂದ ಮಸಾಜ್ ಮಾಡಬೇಕು.
3. ಎದ್ದುಂಬೆ ಸೊಪ್ಪಿನ ರಸ ಪೊಂಗು ಹುಯ್ದು, ಮೆಣಸು ಬೆಳ್ಳುಳ್ಳಿ ಹಾಕಿ ದಿನ ಬಿಟ್ಟು ದಿನ ಮೂರು ಹೊತ್ತು ಸೇವಿಸಲು ವಾತ ದೋಷ ನಿವಾರಣೆ ಆಗುತ್ತದೆ.
ಕಾಯಕಲ್ಪ :-
ಕೈಯಕಲ್ಪವೆಂದರೆ ಕಲ್ಪಾಂತದವರೆಗೆ ಬದುಕುವುದು. ಯಾವ ರೋಗ ರಂಜಿನಗಳಿಗೂ ತುತ್ತಾಗದೆ ಹೆಚ್ಚು ವರ್ಷ ಬದುಕುವ ಔಷಧಗಳು.
1. ಜೇಷ್ಠ ಮಧುವಿನ ಚೂರ್ಣ ಅರ್ಧ ತೊಲದಂತೆ ಒಂದು ವರ್ಷ ಸೇವಿಸಿದರೆ ನೂರು ವರ್ಷ ಬಾಳುತ್ತಾನೆ.
2. ನೆಲಗುಂಬಳ ಗಡ್ಡೆಯ ಚೂರ್ಣವನ್ನು ಹಾಲಿನಲ್ಲಿ ಒಂದು ವರ್ಷ ಕುಡಿಯುತ್ತಾ ಬಂದರೆ ಕಾಯ ಕಲ್ಪ ಸಿದ್ಧಿಯಾಗಿ ನೂರು ವರ್ಷ ಬದುಕುತ್ತಾನೆ.
3. ನೆಲ್ಲಿಕಾಯಿಯನ್ನು ದಿನಕ್ಕೆ ಒಂದರಂತೆ ಒಂದು ವರ್ಷ ಸೇವಿಸಿದರೆ ನೂರು ವರ್ಷ ರೋಗರಹಿತವಾಗಿ ಬದುಕುತ್ತಾರೆ.