ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಐತಿಹಾಸಿಕ ಸತತ 7ನೇ ಆಯವ್ಯಯ ಪ್ರಸ್ತುತಪಡಿಸಲಿದ್ದಾರೆ.
2024-25ರ ಸಾಲಿನ ಪೂರ್ಣ ಬಜೆಟ್ ಇದಾಗಿದೆ. ಬೆಳಗ್ಗೆ 11 ಗಂಟೆಯಿಂದ ಸಚಿವೆ ನಿರ್ಮಲಾ ಬಜೆಟ್ ಮಂಡಿಸುವರು. ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಆಗಿರುವ ಕಾರಣ ಜನರಲ್ಲಿ ಹೆಚ್ಚು ಕುತೂಹಲ ಮನೆಮಾಡಿದೆ.
ನಿರ್ಮಲಾ ಸೀತಾರಾಮನ್ ಈಗಾಗಲೇ ಹಣಕಾಸು ಸಚಿವಾಲಯಕ್ಕೆ ಆಗಮಿಸಿದ್ದು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.















