ಮೈಸೂರು(Mysuru): ಚಾಮುಂಡಿಬೆಟ್ಟ ಈ ಬಾರಿಯ ಅದ್ಧೂರಿ ದಸರಾ ಉದ್ಘಾಟನೆಗೆ ಸಜ್ಜಾಗಿದ್ದು, ಬಿಗಿಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಬೆಟ್ಟದ ತಪ್ಪಲಿನ ಸರ್ಕಲ್ ಬಳಿ ಎಲ್ಲ ವಾಹನಗಳ ತಪಾಸಣೆ ಬಳಿಕವೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಹಾಗೂ ವೇದಿಕೆಯ ಬಳಿ ಲೋಹಶೋಧಕ ಯಂತ್ರವನ್ನು ಅಳವಡಿಸಲಾಗಿದೆ.
ದೇವಾಲಯಕ್ಕೆ ಅತಿಗಣ್ಯರನ್ನಷ್ಟೇ ಬಿಡಲು ವ್ಯವಸ್ಥೆ ಮಾಡಲಾಗಿದೆ.ಬೆಟ್ಟದ ತಪ್ಪಲಿನಿಂದ ತುದಿವರೆಗೂ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.
ಬಾಂಬ್ ಪತ್ತೆ ದಳ ಬೆಟ್ಟದ ದಾರಿಯಲ್ಲಿ ನಿರಂತರ ತಪಾಸಣೆ ನಡೆಸಿದೆ.
Saval TV on YouTube