ಗುವಾಹಟಿ: ತೃತೀಯಲಿಂಗಿ ಸಮುದಾಯವನ್ನು ಸಬಲೀಕರಣಗೊಳಿಸಲು ಶುಕ್ರವಾರ ಗುವಾಹಟಿ ರೈಲು ನಿಲ್ದಾಣದಲ್ಲಿ ಟೀ ಸ್ಟಾಲ್ ಉದ್ಘಾಟಿಸಲಾಗಿದೆ.
ಈಶಾನ್ಯ ಫ್ರಾಂಟಿಯರ್ ರೈಲ್ವೇಯ ‘ಟ್ರಾನ್ಸ್ ಟೀ ಸ್ಟಾಲ್’ ದೇಶದಲ್ಲೇ ಮೊದಲ ಟ್ರಾನ್ಸ್ ಟೀ ಸ್ಟಾಲ್ ಇದಾಗಿದ್ದು, ಆಲ್ ಅಸ್ಸಾಂ ಟ್ರಾನ್ಸ್ ಜೆಂಡರ್ ಅಸೋಸಿಯೇಷನ್ ನ ಸಕ್ರಿಯ ಸಹಯೋಗದಿಂದ ಮಾಡಲಾಗಿದೆ ಎಂದು ಉನ್ನತ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾನ್ಸ್ ಟೀ ಸ್ಟಾಲ್ ಹೆಸರಿನ ಟೀ ಸ್ಟಾಲ್ ಅನ್ನು ಗುವಾಹಟಿಯ ಕಮ್ರೂಪ್ (ಎಂ) ಡೆಪ್ಯುಟಿ ಕಮಿಷನರ್ ಕಛೇರಿ ಆವರಣದಲ್ಲಿ ಪ್ರಾರಂಭಿಸಲಾಯಿತು. ಅಸ್ಸಾಂನ ಟ್ರಾನ್ಸ್‌ಜೆಂಡರ್ ಕಲ್ಯಾಣ ಮಂಡಳಿಯ ಸಹಾಯಕ ಉಪಾಧ್ಯಕ್ಷ ಸ್ವಾತಿ ಬಿಧನ್ ಬರುವಾ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಗುವಾಹಟಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಸಂಖ್ಯೆ 1 ರಲ್ಲಿ ಈಶಾನ್ಯ ಗಡಿ ರೈಲ್ವೆಯ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಅವರು “ಟ್ರಾನ್ಸ್ ಟೀ ಸ್ಟಾಲ್” ಅನ್ನು ಉದ್ಘಾಟಿಸಿದರು.
Saval TV on YouTube