ಮನೆ ಸ್ಥಳೀಯ ಶೀಘ್ರ ವಿಲೇವಾರಿಯ ಸದುದ್ಧೇಶದಿಂದ ವಾರಕ್ಕೆ ಎರಡು ದಿನ ನ್ಯಾಯಾಲಯದ ಕಲಾಪ: ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು

ಶೀಘ್ರ ವಿಲೇವಾರಿಯ ಸದುದ್ಧೇಶದಿಂದ ವಾರಕ್ಕೆ ಎರಡು ದಿನ ನ್ಯಾಯಾಲಯದ ಕಲಾಪ: ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು

0

    ಮೈಸೂರು: ಜಿಲ್ಲೆಯ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಇನ್ನು ಮುಂದೆ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಕಲಾಪಗಳು ವಾರದಲ್ಲಿ ಎರಡು ದಿನ ನಡೆಯಲಿದೆ. ಇದರಿಂದ ಹಳೆಯ ಪ್ರಕರಣಗಳ ಶೀಘ್ರ ವಿಲೇವಾರಿ ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಅವರು ತಿಳಿಸಿದ್ದಾರೆ.

    ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಕಂದಾಯ ನ್ಯಾಯಾಲಯದಲ್ಲಿ ಬಾಕಿ ಇರುವ ಹಳೆಯ ಪ್ರಕರಣಗಳನ್ನು ರೈತರ ಹಿತದೃಷ್ಟಿಯಿಂದ ಹಾಗೂ
    ಶೀಘ್ರ ವಿಲೇವಾರಿಯ ಸದುದ್ಧೇಶದಿಂದ ಇನ್ನು ಮುಂದೆ ವಾರಕ್ಕೆ ಎರಡು ದಿನ ನ್ಯಾಯಾಲಯದ ಕಲಾಪವನ್ನು ನಡೆಸಲು ತೀರ್ಮಾನಿಸಲಾಗಿರುತ್ತದೆ. ಈ ಹಿಂದೆ ಕೇವಲ ಮಂಗಳವಾರ ಮಾತ್ರ ನಡೆಯುತ್ತಿದ್ದ ನ್ಯಾಯಾಲಯ ಕಲಾಪದ ಜೊತೆಗೆ ಇನ್ನು ಮುಂದೆ ಪ್ರತಿ ಶುಕ್ರವಾರವೂ ಸಹ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಕಲಾಪವನ್ನು ನಡೆಸಲಾಗುವುದು. ಇದರ ಸದುಪಯೋಗವನ್ನು ಸಂಬಂಧಪಟ್ಟ ರೈತರು ಹಾಗು ವಕೀಲರು ಬಳಸಿಕೊಂಡು ತಮಗೆ ಅನುಕೂಲವಾದ ದಿನಾಂಕಗಳನ್ನು ಕೋರಿ ಕಲಾಪದಲ್ಲಿ ಭಾಗವಹಿಸಿ ತಮ್ಮ ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು , ಇದರ ಸದುಪಯೋಗವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹಿಂದಿನ ಲೇಖನಕೆಲಸ ಕೇಳುವವರಾಗಬೇಡಿ ನೀಡುವವರಾಗಿ: ಸಚಿವ ಪ್ರಿಯಾಂಕ್ ಖರ್ಗೆ
    ಮುಂದಿನ ಲೇಖನಪೊಲೀಸ್ ಅಧೀಕ್ಷಕರಾದ ವಿ.ಜೆ ಸಜೀತ್ ಅವರ ನೇತೃತ್ವದಲ್ಲಿ ನಗರದ ವಿವಿಧೆಡೆ ಪರಿಶೀಲನೆ