ಮನೆ ರಾಷ್ಟ್ರೀಯ ಮುಂಬೈನಲ್ಲಿ ಕೋವಿಡ್‌ ಹೆಚ್ಚಳ

ಮುಂಬೈನಲ್ಲಿ ಕೋವಿಡ್‌ ಹೆಚ್ಚಳ

0

ಮುಂಬೈ (Mumbai): ಮುಂಬೈನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಶೇ.42 ರಷ್ಟು ಪ್ರಕರಣಗಳ ಹೆಚ್ಚಳವಿದೆ.

ಕಳೆದ 24 ಗಂಟೆಗಳ ಅಂತರದಲ್ಲಿ 1,765 ಹೊಸ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಪೈಕಿ 1,682 ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಜನವರಿ 26ರ ನಂತರ ಒಂದೇ ದಿನದಲ್ಲಿ ದಾಖಲಾಗಿರುವ ಗರಿಷ್ಠ ಪ್ರಕರಣಗಳು ಇದಾಗಿದೆ. ಆದರೆ, ಸೋಂಕಿನ ಕಾರಣಗಳಿಂದಾಗಿ ಸಾವು ಸಂಭವಿಸಿಲ್ಲ.

ಮಂಗಳವಾರಕ್ಕಿಂತ 523 ಅಧಿಕ ಹೊಸ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ ಶೇ.42ರಷ್ಟು ಏರಿಕೆಯಾದಂತಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,000 ತಲುಪಿರುವುದಾಗಿ ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಪ್ರಕಟಿಸಿದೆ.

ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 2,701 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ನಾಲ್ಕು ತಿಂಗಳಲ್ಲೇ ದಾಖಲಾಗಿರುವ ಗರಿಷ್ಠ ಪ್ರಮಾಣವಾಗಿದೆ. ಈವರೆಗಿನ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 10,73,541 ತಲುಪಿದ್ದು, 19,569 ಮಂದಿ ಸಾವಿಗೀಡಾಗಿದ್ದಾರೆ. ಜನವರಿ 26ರಂದು ಮುಂಬೈನಲ್ಲಿ 1,858 ಪ್ರಕರಣಗಳು ದಾಖಲಾಗಿದ್ದವು ಹಾಗೂ 13 ಮಂದಿ ಸಾವಿಗೀಡಾಗಿದ್ದರು.

ಇಂದು 19,185 ಮಾದರಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಿದ್ದು, ಕೋವಿಡ್‌ ಪಾಸಿಟಿವಿಟಿ ದರ ಶೇ 0.091ರಷ್ಟಿದೆ.