ಮನೆ ರಾಷ್ಟ್ರೀಯ ಗೋ ರಕ್ಷಕ ಚಂದ್ರಶೇಖರ್ @ ಫರ್ಸಾ ವಾಲಾ ಬಾಬಾ ಸಾವು; ದೆಹಲಿ-ಆಗ್ರಾ ಹೈವೇ ಬಂದ್ ಮಾಡಿ...

ಗೋ ರಕ್ಷಕ ಚಂದ್ರಶೇಖರ್ @ ಫರ್ಸಾ ವಾಲಾ ಬಾಬಾ ಸಾವು; ದೆಹಲಿ-ಆಗ್ರಾ ಹೈವೇ ಬಂದ್ ಮಾಡಿ ಪ್ರತಿಭಟನೆ..!

0

ಲಕ್ನೋ : ಉತ್ತರಪ್ರದೇಶದ ಮಥುರಾದಲ್ಲಿ ಗೋರಕ್ಷಕ ಚಂದ್ರಶೇಖರ್ ಅಲಿಯಾಸ್ ‘ಫರ್ಸಾ ವಾಲೆ ಬಾಬಾ’ ಹತ್ಯೆ ನಡೆದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಥುರಾ ಜಿಲ್ಲೆಯ ನವಿಪುರ ಗ್ರಾಮದ ಬಳಿ ಘಟನೆ ನಡೆದಿದೆ.

ಬಾಬಾ ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಟ್ರಕ್ ಬೈಕ್‌ನಲ್ಲಿ ಬೆನ್ನಟ್ಟಿ ಹೋಗಿ ತಡೆಯಲು ಯತ್ನಿಸಿದ್ದರು. ಆದರೆ ಟ್ರಕ್‌ನಲ್ಲಿದ್ದ ನಾಲ್ವರು ಆರೋಪಿಗಳು ಬೈಕ್ ಮೇಲೆ ಟ್ರಕ್ ಚಲಾಯಿಸಿ ಬಾಬಾರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈದ್ ಹಬ್ಬದ ನಡುವೆಯೇ ಹತ್ಯೆ ನಡೆದಿದ್ದು, ಮಥುರಾದ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ರಿಕ್ತ ಭಕ್ತರು ಮತ್ತು ಗ್ರಾಮಸ್ಥರು ಭಾರಿ ಪ್ರತಿಭಟನೆ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ.

ಈ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಉದ್ರಿಕ್ತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಅಧಿಕಾರಿಗಳ ವಾಹನಗಳ ಗಾಜುಗಳು ಪುಡಿಯಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಈ ಪರಿಸ್ಥಿತಿ ನಿಯಂತ್ರಣಕ್ಕೆ ಅಶ್ರವಾಯು ಪ್ರಯೋಗಿಸಿ, ಲಾಠಿಚಾರ್ಜ್ ಮಾಡಿದ್ದಾರೆ. ಸಿಎಂ ಯೋಗಿ ಆದಿತ್ಯಾನಾಥ್ ಮಥುರಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.