ಮನೆ ಸುದ್ದಿ ಜಾಲ ಅಂಬೇಡ್ಕರ್ – ವಾಲ್ಮೀಕಿ ಭವನದ ಅನುದಾನ ತಡೆಹಿಡಿಯುವಂತೆ ಸಿಎಂಗೆ ಸಿ.ಪಿ.ಯೋಗೇಶ್ವರ್ ಪತ್ರ ಬರೆದಿರುವುದು ಖಂಡನೀಯ: ದ್ಯಾವಪ್ಪ...

ಅಂಬೇಡ್ಕರ್ – ವಾಲ್ಮೀಕಿ ಭವನದ ಅನುದಾನ ತಡೆಹಿಡಿಯುವಂತೆ ಸಿಎಂಗೆ ಸಿ.ಪಿ.ಯೋಗೇಶ್ವರ್ ಪತ್ರ ಬರೆದಿರುವುದು ಖಂಡನೀಯ: ದ್ಯಾವಪ್ಪ ನಾಯಕ

0

ಮೈಸೂರು(Mysuru): ವಿಧಾನ ಪರಿಷತ್ ಸದಸ್ಯರಾದ ಸಿ ಪಿ ಯೋಗೇಶ್ವರ್ ಅವರು ಚನ್ನಪಟ್ಟಣ ತಾಲ್ಲೂಕಿನ ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನಕ್ಕೆ ಬಿಡುಗಡೆ ಆಗಿರುವ ಹಣವನ್ನು ತಡೆಹಿಡುಯುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುವುದನ್ನು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದು ಅಧ್ಯಕ್ಷ ದ್ಯಾವಪ್ಪ ನಾಯಕ ತಿಳಿಸಿದರು.

ಚನ್ನಪಟ್ಟಣ ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ನೀಡುವ ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನದ ಅನುದಾನವನ್ನು ತಡೆಹಿಡಿಯಲು ಮಾನ್ಯ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದು ಕೋರಿರುವ ಉದ್ದೇಶವೇನೂ.? ಸದಾ ದಲಿತರ ಪರ ಎನ್ನುವ ಸರ್ಕಾರವೂ ಇವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು.

ದಲಿತರ ಉದ್ದಾರಕ್ಕೆ ಮೀಸಲಾಗಿರುವ ಹಣದಲ್ಲಿ ಭವನ ನಿರ್ಮಿಸುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರದ ಪ್ರತಿನಿಧಿ ಯಾಗಿ ಇಂತಹ ಪತ್ರ ಬರೆದಿರುವುದು ಏಕೆ.? ಇದರ ಮರ್ಮ ಏನು ಎಂಬುದನ್ನು ತಿಳಿಸಿಬೇಕು. ಈ ಕೂಡಲೇ ಸ್ಪಷ್ಟೀಕರಣ ಕೊಡಬೇಕು.

ಸಿ ಪಿ ಯೋಗೇಶ್ವರ್ ಅವರು ಈ ಕೂಡಲೇ ದಲಿತರ ಕ್ಷಮೆ ಕೋರಿ, ಪತ್ರವನ್ನು ವಾಪಸ್ ತೆಗೆದುಕೊಳ್ಳಬೇಕು.ಇಲ್ಲದೆ ಹೋದರೆ ಎಸ್ ಸಿ,ಎಸ್  ಟಿ ಸಮುದಾಯದ ಜನರು ಇಡೀ ರಾಜ್ಯದಲ್ಲಿ  ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ದೇವರಾಜ್ ಮಾತನಾಡಿ  ಸಿಪಿ ಯೋಗೇಶ್ ರವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.ದಲಿತರು ಸಿಪಿ ಯೋಗೇಶ್ವರ್ ರವರಿಗೆ ಯಾವ ಅನ್ಯಾಯ ಮಾಡಿದ್ದಾರೆ.

ಅನುದಾನ ತಡೆಹಿಡಿಯುವಂತೆ ಸಿಎಂಗೆ ಪತ್ರ ಬರೆದಿರುವುದು ಎಷ್ಟರ ಮಟ್ಟಿಗೆ ಸರಿ.ಈ ಕೂಡಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹುಣಸೂರು, ಹದಿನಾರು ಪ್ರಕಾಶ್, ಕೆರಹಳ್ಳಿ ಮಾದೇಶ, ಚೆನ್ನನಾಯಕ ಪಾಳೇಗಾರ ದೇವರಾಜ ಶಿವು ಇದ್ದರು.

ಹಿಂದಿನ ಲೇಖನಮಳವಳ್ಳಿಯ ಬಾಲಕಿ ಅತ್ಯಾಚಾರ ಪ್ರಕರಣ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಿಪಕ್ಷ ನಾಯಕ ಸಿದ್ಧರಾಮಯ್ಯ
ಮುಂದಿನ ಲೇಖನಗ್ಯಾಸ್ರ್ಟ್ರಿಕ್, ಬಿಪಿ ಸಮಸ್ಯೆ ಇದ್ದವರು, ಜಾಸ್ತಿ ಒಣದ್ರಾಕ್ಷಿಯನ್ನು ತಿನ್ನಬಾರದು!