ಮನೆ ಆರೋಗ್ಯ ಒಡೆದಿರುವುದು ಗಂಟಲು ಬಾವು

ಒಡೆದಿರುವುದು ಗಂಟಲು ಬಾವು

0

1. ಗಂಟಲು ದೋಷ ನಿವಾರಣೆಗೆ ಗಂಟಲು ಶುದ್ದಿಗೆ ಪುದೀನ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಉಪ್ಪು ಹಾಕಿ, ಒಂದು ಚಿಟಿಕೆ ಕಾಳು ಮೆಣಸಿನ ಪುಡಿ ಬೆರೆಸಿ ಗಂಟಲಿಗೆ ತಾಕುವಂತೆ ಬಾಯಿ ಮುಕ್ಕಳಿಸಬೇಕು ಅಂದರೆ ಗಾಗಲ್ ಮಾಡಬೇಕು.

Join Our Whatsapp Group

2. ಗಂಡಮಾಲೆ ಗಡ್ಡೆಗೆ ನುಗ್ಗೆ ಸೊಪ್ಪಿನ, ನುಗ್ಗೆಚಕ್ಕೆ, ನುಗ್ಗೆ ಬೀಜ ಒಟ್ಟಿಗೆ ಗಂಧದಂತೆ ಕುಟ್ಟಿ ದಪ್ಪನಾಗಿ ಲೇಪ ಹಾಕಬೇಕು.

3. ದೇವದಾರು ಚಕ್ಕೆಯಿಂದ ತಯಾರಿಸಿದ ಗಂಧ ಹಚ್ಚಬೇಕು.

4. ಗಂಟಲು ನೋವು ಇರುವವರು ಮಾವಿನ ಎಲೆಯನ್ನು ಚೆನ್ನಾಗಿ ತೊಳೆದು ಕುದಿಸಿ ಕಷಾಯ ತಯಾರಿಸಿ, ಅದಕ್ಕೆ ನಾಲ್ಕು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುವುದು.

5. ವಸಡಿನ ಬಾವು ನೋವು ಇರುವವರು ವೀಳ್ಯದೆಲೆಯನ್ನು ಎರಡು ಗ್ಲಾಸ್ ನೀರಿನಲ್ಲಿ ಕುದಿಸಿ ಪ್ರತಿ ಗಂಟೆಗೊಮ್ಮೆ ಈ ನೀರಿನಿಂದ ಬಾಯಿ ಮುಕ್ಕಳಿಸುತ್ತಿದ್ದಾರೆ,ಬಾವು ನೋವು ಕಡಿಮೆಯಾಗುವುದು.

6. ಗಂಟಲಿನ ಎರಡು ಭಾಗದಲ್ಲಿರುವ ಟ್ಯಾನ್ಸಿಲ್ ಗಳಿಗೆ ಒಂದು ಲೋಟ ಬಿಸಿ ನೀರಿಗೆ ಒಂದು ನಿಂಬೆಹಣ್ಣಿನ ರಸ ಪೂರ್ತಿ ಹಿಂಡಿ ಅಡಿಗೆ ಉಪ್ಪು ಬೆರೆಸಿ ಶುದ್ಧ ಜೇನು ಬೆರೆಸಿ ಕುಡಿಯುತ್ತಾ ಬರಬೇಕು.

7. ಗಂಟಲು ಬೇನೆ, ನೆಗಡಿ, ಶೀತ, ಗಂಟಲು ಕೆರೆತಗಳಿಗೆ ಒಂದು ನಿಂಬೆಹಣ್ಣನ್ನು ಕೆಂಡದ ಮೇಲೆ ಬಿರಿಯುವಂತೆ ಸುಟ್ಟು ರಸ ಹಿಂಡಿ ಅದಕ್ಕೆ ಜೇನು ಬೆರೆಸಿ ಗಂಟೆಗೊಂದು ಸಾರಿ ನೆಕ್ಕುತ್ತಿರಬೇಕು.

8. ಡಿಫ್ಟೀರಿಯಾ ಅಥವಾ ಎಳೆ ನಾಗರು ಗಂಟಲಿನಲ್ಲಿ ಅದರೆ ನಿಂಬೆಹಣ್ಣಿನ ರಸಕ್ಕೆ ಜೇನು ಬೆರೆಸಿ ಕಿರುನಾಲಿಗೆಗೆ ಹಚ್ಚುತ್ತಾ ಬಿಸಿ ನೀರು ಕುಡಿಯಬೇಕು.

9. ನೆಗಡಿ, ಕೆಮ್ಮು, ಪಿತ್ತದ ಗಂದೆ, ಅಲರ್ಜಿ ಮಕ್ಕಳ ಶೀತ, ನೆಗಡಿ,ಹೊಟ್ಟೆ ಉಬ್ಬರ, ಹೊಟ್ಟೆಯುರಿತಗಳಿಗೆ ದೊಡ್ಡಪತ್ರೆ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಸಬೇಕು.ಮಕ್ಕಳಿಗೆ ಅರ್ಧ ಚಮಚ ಕೊಡಬೇಕು.

10. ಗಂಟಲು ಬಾವು, ಗಂಟಲು ಗಡ್ಡೆ ಮಂಗ ಬಾವು ಗೌತಲಮ್ಮ, ಮುಖ ಬಾವು ಟಾನ್ಸಿಲ್ ಗಳಿಗೆ ದತ್ತೂರಿ ಎಲೆಗಳನ್ನು ಅರೆದು ಅದಕ್ಕೆ ಬೆಲ್ಲ, ಅಕ್ಕಿ ಹಿಟ್ಟು ಸೇರಿಸಿ ಲೇಪನ ಹೊರಗಡೆ ಲೇಪನ ಮಾಡಬೇಕು. ಊದಿದ ಭಾಗಗಳು ಸಮಸ್ಥಿತಿಗೆ ಬರುತ್ತದೆ. ಇಲ್ಲಿ ದತ್ತೂರಿ ಎಂದರೆ ಉಮ್ಮತಿ ಗಿಡ.ಇದನ್ನು ಸೇವಿಸಬಾರದು.

11. ಗಂಟಲ ನೋವಿಗೆ ಒಂದು ಚಮಚ ತುಳಸಿ ರಸಕ್ಕೆ ಜೇನು ಬೆರೆಸಿ ಕುಡಿಯುವುದರಿಂದ ಶಮನವಾಗುವುದು.

12.ಶೀತ, ಕೆಮ್ಮು, ಜ್ವರ ಇನ್ ಪ್ಲೋಎಂಜಕ್ಕೆ  20 ಕರಿ ತುಳಸಿ ದಳ, ಐದು ಕಾಳುಮೆಣಸು,ಎರಡು ವಿಲೇದಲ್ಲೇ, ಎರಡು ಲವಂಗ ಒಟ್ಟಿಗೆ ಜಜ್ಜಿ ಒಂದು ಚಮಚ ಜೇನಿನಲ್ಲಿ ಬೆರೆಸಿ ಕೊಡಬೇಕು. ಹಸಿ ಶುಂಠಿ ರಸ, ಅಡುಸೋಗೆ ರಸ ಬೆರೆಸಿದರೆ ದಮ್ಮು ಸಹ ಗುಣವಾಗುವುದು.

13. ಜ್ವರ ಶೀತ ನೆಗಡಿ, ಕೆಮ್ಮುಗಳಿಗೆ, ಅರ್ಧ ಚಮಚ ತುಂಬೆರಸಕ್ಕೆ ಜೇನುಬೆರೆಸಿ ಮೂರು ಬಾರಿ ಸೇವಿಸಬೇಕು. ಬಿಳಿಗಾರದ ಅರಳಿನಪುಡಿ ಸೇರಿಸಿ ಕೊಟ್ಟರೆ ಅಧಿಕ ಗುಣ ಕಂಡುಬರುವುದು.

14. ಗಂಟಲು ನೋವು ಇದ್ದರೆ ಹಸಿ ಶುಂಠಿ ಅಗಿದು, ರಸ ನುಂಗುತ್ತಿರಬೇಕು.ಹಸಿ ಶುಂಠಿಯ ಚೂರುಗಳಿಗೆ ಸಕ್ಕರೆ ಬೆರೆಸಿ ಅಗಿದು, ರಸ ಹೀರುತ್ತಿರುವುದು. ಲವಂಗದ ಜೊತೆ ಉಪ್ಪು ಸೇರಿಸಿ, ಅಗಿದು ರಸ ನುಂಗುವುದರಿಂದ ಗುಣವಾಗುತ್ತದೆ.

15. ಬಿಸಿ ನೀರಿನಿಂದ ಗಾರ್ಗಲ್ ಮಾಡಿದರೆ ಗಂಟಲು ನೋವು ನಿವಾರಣೆ ಆಗುವುದು. ನಂತರ ಓಮಿನ ಕಷಾಯವನ್ನಾದರೂ ಅಥವಾ ಅಳೆಲೇಕಾಯಿ  ಕಷಾಯವನ್ನಾದರೂ  ಸೇವಿಸಿದರೆ ಗುಣವಾಗುವುದು.

16. ಮಾವಿನ ಎಲೆ,,ತೊಗಟೆಗಳ ಕಷಾಯದಿಂದ ಗಾರ್ಗಲ್ ಮಾಡಿದರೆ ಗಂಟಲು ನೋವು ಹರವಾಗುವುದು.ನಂತರ ಅಡಿಕೆ ಕಷಾಯ ಸೇವಿಸಬೇಕು.

ಹಿಂದಿನ ಲೇಖನಎತ್ತಲೋ ಮಾಯವಾದ ಮುತ್ತಿನ
ಮುಂದಿನ ಲೇಖನತ್ರ್ಯಂಗ ಮುಖೈಕಪಾದ ಪಶ್ಚಿಮೋತ್ತಾನಾಸನ