Saval TV on YouTube
ಅಲೀಗಢ: ಉತ್ತರಾಖಂಡದ ಜೋಶಿಮಠ ಪ್ರದೇಶದಲ್ಲಿ ಭಾರಿ ಭೂ ಕುಸಿತ ವರದಿಯಾದ ಬೆನ್ನಲ್ಲೇ ಇದೀಗ ಅಲೀಗಢ ಪ್ರದೇಶದ ಹಲವು ಮನೆಗಳಲ್ಲಿ ಬಿರುಕು ಕಂಡುಬಂದಿದೆ.
ಮನೆಗಳು ಬಿರುಕು ಬಿಟ್ಟು ನಡೆದು ಮೂರ್ನಾಲ್ಕು ದಿನಗಳಾಗಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನ ಆಗಿಲ್ಲ . ಅನಿವಾರ್ಯವಾಗಿ ಭಯದಿಂದಲೇ ಬದುಕಬೇಕಾದ ಸ್ಥಿತಿ ಸ್ಥಳೀಯರದ್ದಾಗಿದೆ.
ಕಳೆದ ಕೆಲವು ದಿನಗಳಿಂದ ನಮ್ಮ ಪ್ರದೇಶದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ನಮಗೆ ಭಯ ಉಂಟು ಮಾಡಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ದೂರು ನೀಡಿದರೆ, ಭರವಸೆ ನೀಡುತ್ತಾರೆ ಹೊರತು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮನೆ ಕುಸಿಯುವ ಆತಂಕದಲ್ಲಿ ನಾವಿದ್ದೇವೆ ಎಂದು ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿ ಪೈಪ್ಲೈನ್’ಗಳನ್ನು ಹಾಕಲಾಗಿದ್ದು, ಅವುಗಳು ಈಗ ಸೋರುತ್ತಿವೆ. ಹೀಗಾಗಿ ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ ಎನ್ನುವುದು ಸ್ಥಳೀಯರ ಆರೋಪ.















