ಮನೆ ಅಂತಾರಾಷ್ಟ್ರೀಯ ಚಲಿಸುತ್ತಿದ್ದ, ರೈಲಿನ ಮೇಲೆ ಬಿತ್ತು ಕ್ರೇನ್‌ – 22 ಮಂದಿ ಸಾವು..!

ಚಲಿಸುತ್ತಿದ್ದ, ರೈಲಿನ ಮೇಲೆ ಬಿತ್ತು ಕ್ರೇನ್‌ – 22 ಮಂದಿ ಸಾವು..!

0

ಬ್ಯಾಂಕಾಕ್‌ : ಚಲಿಸುತ್ತಿದ್ದ ರೈಲಿನ ಮೇಲೆ ಕ್ರೇನ್ ಬಿದ್ದು ಕನಿಷ್ಠ 22 ಜನ ಮೃತಪಟ್ಟ ಘಟನೆ ಥೈಲ್ಯಾಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ನಡೆದಿದೆ. ಬ್ಯಾಂಕಾಕ್‌ನಿಂದ ಈಶಾನ್ಯಕ್ಕೆ 230 ಕಿಮೀ (143 ಮೈಲುಗಳು) ದೂರದಲ್ಲಿರುವ ನಖೋನ್ ರಾಟ್ಚಸಿಮಾ ಪ್ರಾಂತ್ಯದ ಸಿಖಿಯೊ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ.

ರೈಲು ಉಬೊನ್ ರಾಟ್ಚತಾನಿ ಪ್ರಾಂತ್ಯಕ್ಕೆ ಹೋಗುತ್ತಿತ್ತು. ಈ ವೇಳೆ ಹೈಸ್ಪೀಡ್ ರೈಲು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕ್ರೇನ್‌ ಕುಸಿದು ಒಂದು ಬೋಗಿಯ ಮೇಲೆ ಬಿದ್ದಿದೆ. ಕ್ರೇನ್‌ ಬೋಗಿಯ ಮೇಲೆ ಬಿದ್ದ ಕೂಡಲೇ ರೈಲು ಹಳಿ ತಪ್ಪಿದೆ. ರೈಲಿನಲ್ಲಿ ಸುಮಾರು 195 ಜನ ಪ್ರಯಾಣಿಸುತ್ತಿದ್ದರು. ಅಪಘಾತದ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ.