ಗ್ವಾಲಿಯರ್: ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿ ಪತನಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಸುಖೋಯ್ ಸು-30ಎಂಕೆಐ ಮತ್ತು ಮಿರಾಜ್ 2000 ಯುದ್ಧವಿಮಾನಗಳು ಈ ಪ್ರದೇಶದಲ್ಲಿ ವ್ಯಾಯಾಮ ಮಾಡುತ್ತಿದ್ದವು ಎಂದು ವರದಿಯಾಗಿದೆ.
ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಎರಡೂ ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿರುವ ವಾಯುನೆಲೆಯಿಂದ ಟೇಕಾಫ್ ಆಗಿವೆ. ಆದರೆ, ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಘಟನೆಯ ಸಂಪೂರ್ಣ ಮೌಲ್ಯಮಾಪನದ ನಂತರ ಇನ್ನಷ್ಟು ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಗಳ ಅವಶೇಷಗಳನ್ನು ಗುರುತಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.
“ಬೆಳಿಗ್ಗೆ 10-10.15 ರ ಸುಮಾರಿಗೆ ವಿಮಾನ ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿತು. ಇಲ್ಲಿಗೆ ಬಂದ ನಂತರ ಅದು ಭಾರತೀಯ ವಾಯುಸೇನೆಯ ಯುದ್ಧ ವಿಮಾನ ಎಂದು ತಿಳಿಯಿತು. ಇದು ಯುದ್ಧ ವಿಮಾನವೇ ಅಥವಾ ಸಾಮಾನ್ಯ ವಿಮಾನವೇ ಎಂದು ನಿರ್ಣಯಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಪೈಲಟ್’ಗಳು ಹೊರಬಂದಿದ್ದಾರೆಯೇ ಅಥವಾ ಇನ್ನೂ ಇದ್ದಾರೆಯೇ ಎಂದು ತಿಳಿಯಬೇಕಿದೆ” ಎಂದು ಭರತ್ ಪುರ ಡಿಎಸ್’ಪಿ ತಿಳಿಸಿದ್ದಾರೆ.