ಮನೆ ಮಾನಸಿಕ ಆರೋಗ್ಯ ಹುಚ್ಚು: ವಾಸಿಯಾಗಬಹುದು..?

ಹುಚ್ಚು: ವಾಸಿಯಾಗಬಹುದು..?

0

ನೀವೆಲ್ಲಾ. ಹುಚ್ಚು ಹಿಡಿದ ವ್ಯಕ್ತಿಗಳನ್ನು ರಸ್ತೆಯಲ್ಲೂ, ಮಾರುಕಟ್ಟೆ ಬಳಿಯೋ, ನೀವಿರುವ ಬಡಾವಣೆಯಲೋ ನೋಡಿರುತ್ತೀರಿ. ಈ ರೋಗಿಗಳು ಅಪಾಯಕಾರಿ ಇರಬಹುದೇನೋ ಎಂದು ಭಾವಿಸಿ,ಕೆಲವರು ಭಯಪಡುತ್ತಾರೆ ಅವರಿಂದ ದೂರವಿರುತ್ತಾರೆ.ಕೆಲವರಿಗೆ ಈ ರೋಗಿಗಳು ಆ ವಿಚಿತ್ರವಾಗಿ ಆಡುವುದನ್ನು ಮಾಡುವುದನ್ನು ನೋಡಿದರೆ ತಮಾಷೆ ಅವರನ್ನು ಚುಡಾಯಿಸಿ, ಹಾಸ್ಯ ಮಾಡುತ್ತಾರೆ.

Join Our Whatsapp Group

ಇನ್ನು ಕೆಲವರು ಆ ರೋಗಿಗಳ ಅಸಹಾಯಕತೆಯನ್ನು. ದುಃಸ್ಥಿತಿಯನ್ನು ಕಂಡು ಮರುಕ ಪಡುತ್ತಾರೆ ಅಯ್ಯೋ ಪಾಪ ಎಂದು, ತಿನ್ನಲು ಒಂದಿಷ್ಟು ಆಹಾರವನ್ನು ಕೊಡುತ್ತಾರೆ ಈ ಎಲ್ಲರೂ ಒಂದಲ್ಲ ಒಂದು ಸಾರಿ, ಈ ನತದೃಷ್ಟ  ರೋಗಿಗಳು ಹೀಗಾಗಲು, ಹುಚ್ಚು ಚ್ಚಾಗಿ ಆಡಲು ಕಾರಣವೇನು ಎಂದು ಯೋಚಿಸುವುದರಿಂದ ಸಂದೇಹವಿಲ್ಲ ತಾವು ಹೀಗೆ ಆಡುವುದು ಈ ರೋಗಿಗಳಿಗೆ ತಿಳಿದಿದ್ದೀಯೇ ಇವರು ಈ ರೀತಿಯಾಗಲು ಏನು ಕಾರಣ ಯಾರೂ ಹುಚ್ಚರಾಗಿಯೇ ಹುಟ್ಟುವುದಿಲ್ಲ.ನಡುವೆ ಹುಚ್ಚು ಬರುವುದು ಏತಕ್ಕೆ ಹುಚ್ಚಿಗೆ ಚಿಕಿತ್ಸೆ ಇದೆಯೇ ವೈದ್ಯರು ಔಷಧಿಗಳಿಂದ  ಈ ರೋಗಿಗಳಿಗೆ ಸಹಾಯವಾಗಬಹುದೇ ಹುಚ್ಚು ಖಾಯಿಲೆಯನ್ನು ತಡೆಯುವುದು ಸಾಧ್ಯವಿದೆಯೇ ಎಂಬ ಹಲವಾರು ಪ್ರಶ್ನೆಗಳು ಯೋಚಿಸಬಲ್ಲವರನ್ನು ಕಾಡುತ್ತವೆ.

 ಹುಚ್ಚು ಎಂದರೇನು

ಆರೋಗ್ಯವಂತನಾದ ವ್ಯಕ್ತಿ ಸನ್ನಿವೇಶಕ್ಕೆ ತಕ್ಕಂತೆ ಅರ್ಥಪೂರ್ಣವಾಗಿ ಮಾತಾಡಬಲ್ಲ ಪ್ರತಿ ಸಂದರ್ಭದಲ್ಲೂ ನಾಲ್ಕು ಜನ ಒಪ್ಪುವ ರೀತಿ ನಡೆದುಕೊಳ್ಳಬಲ್ಲ ತರ್ಕ ಬದ್ಧವಾಗಿ ಆಲೋಚಿಸಬಲ್ಲ ಹಾಗೂ ತನಗೆ ಮತ್ತು ತನ್ನ ಮನೆಯವರಿಗೆ ಒಳಿತಾಗುವಂತಹ ತೀರ್ಮಾನಗಳನ್ನು ಕೈಗೊಳ್ಳಬಲ್ಲ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಅರಿತುಕೊಂಡು ತಾನು ಅದರಂತೆ ನಡೆಯಬಲ್ಲ. ಎಲ್ಲರೋಡನೆ ಹೊಂದಿಕೊಂಡು. ಅನುಕೂಲವಾಗಿರಬಲ್ಲ. ಸನ್ನಿವೇಶಕ್ಕೆ ತಕ್ಕಂತೆ  ಭಾವನೆಗಳನ್ನು ಪ್ರದರ್ಶಿಸಬಲ್ಲ.ಎಲ್ಲರೊಂದಿಗೆ ಸೌಹಾರ್ದ ದಿಂದಿರಲು, ತನ್ನ ಕೈಲಾದೂದನ್ನೆಲ್ಲಾ ಮಾಡುತ್ತಾನೆ.

     ಆದರೆ ಹುಚ್ಚು ಖಾಯಿಲೆ ಬಂದಾಗ ಆತ ಬದಲಾಗುತ್ತಾನೆ. ಅರ್ಥವಿಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಾನೆ ವಿಪರೀತ ಮಾತನಾಡಬಹುದು ಅಥವಾ ಮಾತೇ ಆಡದಿರಬಹುದು. ಜನರು ಒಪ್ಪಲು ಸಾಧ್ಯವಿಲ್ಲದಂತಹ ಹಾಗೂ ವಿಚಿತ್ರವಾದ ನಡವಳಿಕೆಯನ್ನು ತೋರಿಸಬಹುದು. ಅತಿಯಾದ ಚಟುವಟಿಕೆಗೆ ಅಥವಾ ಚಟುವಟಿಕೆಯೇ ಇಲ್ಲದೆ ಮಂಕನಾಗಬಹುದು. ಆತ ಸರಿಯಾಗಿ ಯೋಚಿಸಲಾರ ವಿಚಿತ್ರವಾದ,ಹೊಸ ಬಗೆಯ ಆಲೋಚನೆಗಳನ್ನು ಮಾಡುತ್ತಾನೆ ಅವನ್ನು ಒಪ್ಪಿಕೊಳ್ಳಲು ಬೇರೆಯವರಿಗೆ ಕಷ್ಟವಾಗುತ್ತದೆ. ಸರಿಯಾದ ತೀರ್ಮಾನಗಳನ್ನು ಮಾಡಲಾರ. ತಪ್ಪು ನಿರ್ಧಾರಗಳನ್ನು ಮಾಡಿ,ತನ್ನನ್ನು ತನ್ನ ಮನೆಯವರನ್ನು ಕಷ್ಟಕ್ಕೆ ಗುರಿ ಮಾಡುತ್ತಾನೆ.ಕೆಲವು ಸಾರಿ ಅವನು ಕೈಗೊಳ್ಳುವ ತೀರ್ಮಾನಗಳಿಂದ ಬಹಳ ಜನ ಅಪಾಯಕ್ಕೀಡಾಗಬಹುದು.ಸುತ್ತಮುತ್ತ ಏನು ನಡೆಯುತ್ತಿದೆ ಎಂದು ಅರ್ಥ ಮಾಡಿಕೊಳ್ಳಲಾಗದೆ,ವಾಸ್ತವಿಕ ಸತ್ಯ ಏನು ಎಂದು ತಿಳಿಯಲಾರ. ತನ್ನದೇ ಆದ ಪ್ರಪಂಚದಲ್ಲಿ ದ್ದುಬಿಡುತ್ತಾನೆ, ಬೇರೆಯವರೊಂದಿಗೆ ಹೊಂದಿಕೊಳ್ಳಲು ಸ್ವಲ್ಪವೂ ಪ್ರಯತ್ನಿಸುವುದಿಲ್ಲ ಇದರಿಂದ ತಾನು ತೊಂದರೆಗೀಡಾದರೂ ಗಮನಿಸುವುದಿಲ್ಲ. ತನ್ನ  ಬಂಧುಗಳು ಸ್ನೇಹಿತರನ್ನು ಗುರುತಿಸಲ್ಪಡಬಹುದು ತನ್ನ ಹೆಸರು ಸಾಮರ್ಥ್ಯಗಳು

ತನ್ನ ಬೇಕು ಬೇಡಗಳನ್ನು ನೋಡಿ ಕೊಳ್ಳುವುದಿಲ್ಲ ಸರಿಯಾಗಿ ಊಟ ಮಾಡುವುದಿಲ್ಲ ಸ್ನಾನ ಮಾಡಿ ಶುಚಿಯಾಗಿರುವುದಿಲ್ಲ. ತನ್ನ ಬಟ್ಟೆ ಬರೆ ಬಗ್ಗೆ ಉದಾಸಿನ ಮಾಡುತ್ತಾನೆ, ಕೊಳೆಯಾದ.ಚಿಂದಿ ಬಟ್ಟೆಯುಟ್ಟು ಅರಬೆತ್ತಲೆ ಓಡಾಡಬಹುದು ಸಂದರ್ಭಕ್ಕೆ ವಿರುದ್ಧವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ತೋರಿಕೆಯ ಯಾವ ಕಾರಣವೂ ಇಲ್ಲದೆ ನಗುವುದು ಕೋಪ ಮಾಡುವುದು ಕಂಡುಬರುತ್ತದೆ.

 ಅಥವಾ ಭಾವನೆಯನ್ನೇ ತೋರಿಸದಿರಬಹುದು. ಬೇರೆಯವರೊಂದಿಗೆ ಸೌಹಾರ್ದ ದಿಂದಿರದೆ ಎಲ್ಲರಿಗೂ ತೊಂದರೆ ಕೊಡುತ್ತಾ  ಪೀಡೆಯಾಗಬಹುದು. ಆಕಾರಣವಾಗಿ ಸಂಶಯ ಪಿಡಿತನಾಗಿ. ಬೇರೆಯವರು ತನಗೆ ತೊಂದರೆ ಕೊಡಲು ತನ್ನನ್ನು ಕೊಲ್ಲಲು ಸಂಚು ಮಾಡುತ್ತಿದ್ದಾರೆ ಎಂದು ಆಪಾದಿಸಬಹುದು;ಜನರುನ್ನು ಬಯ್ಯ ಬಹುಹುದು; ಹೊಡೆಯಬಹುದು. ಅಸ್ತಿಪಾಸ್ತಿಯನ್ನು ನಾಶಮಾಡಿ ಹಿಂಸಾಚಾರಕ್ಕೆ ಇಳಿಯಬಹುದು  ಊರೆಲ್ಲಾ ಅಲೆಯಬಹುದು. ರಾತ್ರಿ ನಿದ್ರೆ ಮಾಡುವುದಿಲ್ಲ. ಕೆಲವು ಸಾರಿ ತಾನೆಲ್ಲಿದ್ದೇನೆ ಎಂಬುದು ಅವನಿಗೆ ತಿಳಿಯದೇಹೋಗಬಹುದು; ತನ್ನ ಬಂಧುಗಳು, ಸ್ನೇಹಿತರನ್ನು  ಗುರಿತಿಸದಿರಬಹುದು. ತನ್ನ ಹೆಸರು, ಗುರುತನ್ನೇ ಮರೆಯಬಹುದು ಆತನ್ನ ಜ್ಞಾಪಶಕ್ತಿ ಬುದ್ಧಿಶಕ್ತಿ ಮತ್ತಿ ತರ ಸಾಮರ್ಥ್ಯಗಳು ಕುಂದಬಹುದು ಕ್ರಮೇಣ ಸಂಬಂಧಪಟ್ಟವರಿಗೆ ಹೊರೆಯಾಗುತ್ತಾನೆ. ಈ ತೊಂದರೆಗಳು ವಿವಿಧ ಮಟ್ಟದಲ್ಲಿ ರೋಗಿಯನ್ನು ಕಾಣುತ್ತವೆ. ಈ ಸ್ಥಿತಿಯನ್ನೇ ಜನ ಸಾಮಾನ್ಯರು ‘ಹುಚ್ಚು ’ಎಂದು ಗುರುತಿಸುತ್ತಾರೆ

    ಮನಸ್ಸಿನ ತೀವ್ರ ಖಾಯಿಲೆಯ ಪರಿಣಾಮವೇ ಹುಚ್ಚು. ತಜ್ಞರು ಇದನ್ನು ಚಿತ್ತ ವಿಕಲತೆ (Psychosis)ಎನ್ನುತ್ತಾರೆ. ನಮ್ಮ ಮಾತು, ವರ್ತನೆ, ಆಲೋಚನೆ, ಭಾವನೆ, ಜ್ಞಾಪಕ, ಬುದ್ಧಿಶಕ್ತಿ ಎಲ್ಲಾ ನಮ್ಮ ಮನಸ್ಸಿನ ಕ್ರಿಯೆಗಳು. ಮನಸ್ಸಿಗೆ ಖಾಯಿಲೆ ಬಂದಾಗ ಈ ಕ್ರಿಯೆಗಳು ಅಸ್ತವ್ಯಸ್ಥಗೊಳ್ಳುತ್ತವೆ. ನಮ್ಮ ಮನಸ್ಸಿರುವುದು ನಮ್ಮ ಮಿದುಳಿನಲ್ಲಿ. ಹೀಗಾಗಿ ಮೆದುಳಿನ ಅನೇಕ ಖಾಯಿಲೆಗಳು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಲ್ಲವು. ಅದ್ದರಿಂದ ಮನಸ್ಸಿನ ಕ್ರಿಯೆಗಳು ಏರುಪೇರುದಾಗ, ಮಿದುಳಿಗೆ ಖಾಯಿಲೆ ಬಂದಾಗ ಚಿತ್ತವಿಕಲತೆ ಕಾಣಿಸಿಕೊಳ್ಳುತ್ತದೆ

   ಚಿತ್ತವಿಕಲತೆ   ಮಾನವನ್ನು ಅನಾದಿಕಾಲದಿಂದ ಕಾಡುತ್ತಿರುವ ಅನೇಕ ಖಾಯಿಲೆಗಳಲ್ಲಿ ಒಂದು. ಈ ಕಾಯಿಲೆಯ ವಿವರಣೆಯನ್ನು ಪ್ರಪಂಚದ ಪ್ರಾಚೀನ ಸಾಹಿತ್ಯದಲ್ಲಿ ಕಾಣಬಹುದು. ಚಿತ್ರವಿಕಲತೆ ಎಲ್ಲ ಜನಾಂಗಗಳಲ್ಲಿ,ಅಭಿವೃದ್ಧಿ ಹೊಂದಿರುವ ಅಭಿವೃದ್ಧಿ ಹೊಂದದಿರುವ ಎಲ್ಲ ದೇಶಗಳಲ್ಲಿ ಕಂಡುಬರುತ್ತದೆ ತಜ್ಞರು ಪ್ರಕಾರ ಯಾವುದೇ ಅವಧಿಯಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಐದರಿಂದ ಹತ್ತು ಜನ ಈ ಖಾಯಿಲೆಯಿಂದ ಬಳಲುತ್ತಾರೆ.

ಹಿಂದಿನ ಲೇಖನಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾಪಂ ಇಒ ಮುನಿರಾಜು
ಮುಂದಿನ ಲೇಖನಅಪ್ರಾಪ್ತ ಬಾಲಕನನ್ನು ಹೆದರಿಸಿ ಚಿನ್ನ ವಸೂಲಿ ಮಾಡಿದ ಆರೋಪಿಗಳ ಬಂಧನ