ಮನೆ ರಾಜ್ಯ ನಾಲೆ ಏರಿ ಮೇಲೆ ಮೊಸಳೆ ಪ್ರತ್ಯಕ್ಷ. ರೈತರು ಆತಂಕ

ನಾಲೆ ಏರಿ ಮೇಲೆ ಮೊಸಳೆ ಪ್ರತ್ಯಕ್ಷ. ರೈತರು ಆತಂಕ

0

ಶ್ರೀರಂಗಪಟ್ಟಣ: ತಾಲೂಕಿನ ಬೊಮ್ಮೂರು ಅಗ್ರಹಾರ ಬಳಿಯ ವಿರಿಜಾ ನಾಲೆ ಏರಿಮೇಲೆ ಮೊಸಳೆಯೊಂದು ಪ್ರತ್ಯೇಕ್ಷಗೊಂಡಿದ್ದು ರೈತರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ.

Join Our Whatsapp Group

ವಿರಿಜಾ ನಾಲೆ ಸಂಪೂರ್ಣವಾಗಿ ಗಿಡ ಗಂಟಿಗಳಿಂದ ಆವರಿಸಿಕೊಂಡಿದ್ದು,ಭಾರಿ ಗಾತ್ರದ ಮೊಸಳೆ ಕಾಣಿಸಿ ಕೊಂಡಿದೆ.

ಇದರಿಂದ ರೈತರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮೊಸಳೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಬೊಮ್ಮೂರು ಗ್ರಾಮದ  ಬಳಿಯ ವಿರಿಜಾ ನಾಲೆ ಬಳಿ ಬೆಳಗ್ಗಿನ ವೇಳೆಯಲ್ಲೆ ಮೊಸಳೆ ನಾಲೆ ಏರಿ ಮೇಲೆ ಓಡಾಡುತ್ತಿದ್ದು, ರೈತರು ತಮ್ಮ ಜಮೀನುಗಳಿಗೆ ತೆರಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ನಾಲೆ ಸುತ್ತಲು ಆಳೆತ್ತರದ ಗಿಡಗಂಟೆಗಳು ಬೆಳೆದಿರುವುದ ಮೊಸಳೆ ಅವಿತುಕುಳಿತುಕೊಳ್ಳುವ ಸಾಧ್ಯತೆಗಳಿವೆ ಸ್ವಚ್ಚಗೊಳಿಸುವ ಜೊತೆಗೆ ಮೊಸಳೆ ಸೆರೆ ಹಿಡಿಯುವಂತೆ ಸ್ಥಳೀಯ ರೈತರು ಒತ್ತಾಯಿಸಿದ್ದಾರೆ. ನಾಲೆಯಲ್ಲಿ ನೀರು ಬಿಟ್ಟ ವೇಳೆಯಲ್ಲಿ ಮೊಸಳೆಗಳು ಬಂದು ಸೇರಿಕೊಂಡಿದ್ದು,ನಾಲೆ ನೀರು ಹರಿಯುವ ಗ್ರಾಮಗಳ ಮೊಗ್ಗಲಲ್ಲಿ ವಾಸಿದ್ದು ಗ್ರಾಮಗಳ ಮಹಿಳೆಯರು ಬಟ್ಟೆ ಒಗೆಯುವುದಾಗಿ ಹಾಗೂ ಜನ ಜಾನುವಾರುಗಳು ನಾಲೆಯಲ್ಲಿ ಕೈಕಾಲು ಮುಖ ತೊಳೆಯುವಾಗ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದ್ದು, ಕುರಿ ಮೇಕೆಗಳ ಹೊತ್ತು ಹೋಗಿರುವ ಘಟನೆಗಳು ಸಹ ನಡೆದಿದೆ.

ನಾಲೆಯಲ್ಲಿ ಮೊಸಳೆ ಕಂಡವರು ಈ ಬಗ್ಗೆ ಹಲವಾರು ಬಾರಿ ಅರಣ್ಯಾಧಿಕಾರಿಗಳಿಗೆ ದೂರಿದರೂ ಅದಕ್ಕೆ ಅಧಿಕಾರಿಗಳು ಸ್ಪಂದನೆ ನೀಡದಿರುವುದು ಗ್ರಾಮಸ್ಥರಿಗೆ ಬೇಸರದ ಸಂಗತಿಯಾಗಿದೆ.ಕೂಡಲೇ ನಾಲೆಗಳು ಅಥವ ಎರಿಗಳ ಬಳಿ ಇರುವ ಮೊಸಳೆಗಳಿನ್ನು ಅಧಿಕಾರಿಗಳು ಹಿಡಿಯುವ ಪ್ರಯತ್ನ ಮಾಡಬೇಕು ಎಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಿಂದಿನ ಲೇಖನದೇಶದ ಯಾವುದೇ ಸ್ಥಳ ಹಾಗೂ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪಡೆಯಬಹುದು – ಕೆ.ಹೆಚ್ ಮುನಿಯಪ್ಪ
ಮುಂದಿನ ಲೇಖನಹಾಡುಹಗಲೇ ಮದ್ದೂರಿನಲ್ಲಿ ಸರಗಳ್ಳತನ: 70 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾದ ದುಷ್ಕರ್ಮಿಗಳು