ಮನೆ ರಾಷ್ಟ್ರೀಯ ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ; ಇಬ್ಬರು ಪೊಲೀಸರ ವಶಕ್ಕೆ..!

ಗಡಿಯಲ್ಲಿ ತಪಾಸಣೆ ವೇಳೆ ಸಿಕ್ಕಿಬಿತ್ತು ಕೋಟಿ ಹಣ; ಇಬ್ಬರು ಪೊಲೀಸರ ವಶಕ್ಕೆ..!

0

ಕಾರವಾರ : ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಗೋವಾದಿಂದ ಬೆಂಗಳೂರಿಗೆ ದಾಖಲೆ ಇಲ್ಲದೇ ಒಂದು ಕೋಟಿ ಹಣ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿಯ ಮಾಜಾಳಿ ಚಕ್ ಪೋಸ್ಟ್ ಬಳಿ ನಡೆದಿದೆ.

ಗೋವಾದಿಂದ ಬೆಂಗಳೂರಿನ ಹೊಸೂರಿಗೆ 1 ಕೋಟಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು. ಚೆಕ್‌ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುವ ವೇಳೆ ಚೀಲದಲ್ಲಿ ಹಣ ಪತ್ತೆಯಾಗಿದೆ. ಹಣದ ಸಂಬಂಧ ದಾಖಲೆ ಕೇಳಿದಾಗ ನೀಡದ ಕಾರಣ ಬೆಂಗಳೂರು ಮೂಲದ ಕಲ್ಪೇಶ, ರಾಜಸ್ಥಾನ ಮೂಲದ ಬಮರ ರಾಮ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಕೊಳ್ಳಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಗಳೂರಿನ ಕಲ್ಪೇಶ್ ಹಾಗೂ ಬಮರ ರಾಮ್ ಗೋವಾದ ಬೇರೆಯೊಬ್ಬರ ಹಣವನ್ನು ವ್ಯವಹಾರಕ್ಕಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಆದರೆ ಈ ಹಣದ ಮೂಲ ದಾಖಲೆಗಳನ್ನು ಪೊಲೀಸರು ಕೇಳಿದಾಗ ನೀಡಿಲ್ಲ.

ಚಿತ್ತಾಕುಲ ಪೊಲೀಸರು ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಕಲ್ಪೇಶ್ ಹಣ ಸಾಗಾಟ ವ್ಯವಹಾರ ಮಾಡುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಣ ಹವಾಲಾದ್ದೋ ಅಥವಾ ಇನ್ಯಾವುದೋ ಎಂಬ ಬಗ್ಗೆ ತಿಳಿದುಬರಬೇಕಿದೆ.