ಬೆಂಗಳೂರು: ಆನ್ಲೈನ್ ಟ್ರೇಡಿಂಗ್ ನೆಪದಲ್ಲಿ ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ನಾಲ್ವರು ಸೈಬರ್ ಕಳ್ಳರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಶಶಿಕುಮಾರ್, ಸಚಿನ್, ಕಿರಣ್, ಚರಣ್ ರಾಜ್ ಬಂಧಿತ ಆರೋಪಿಗಳು. ಸದ್ಯ ಬಂಧಿತ ಆರೋಪಿಗಳನ್ನು ಬೆಂಗಳೂರು ಇಡಿ ಕೋರ್ಟ್ಗೆ ಹಾಜರು ಪಡಿಸಿದ್ದು ಆರೋಪಿಗಳನ್ನು 7 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಈ ಆರೋಪಿಗಳು ಆನ್ ಲೈನ್ ಟ್ರೇಡಿಂಗ್ ಹೆಸರಲ್ಲಿ ಜನರಿಂದ ಕೋಟ್ಯಂತರ ಹಣ ಪಡೆದು ವಂಚನೆ ಮಾಡುತ್ತಿದ್ದರು. ನಕಲಿ ಕಂಪನಿಗಳ ಹೆಸರಲ್ಲಿ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ನಕಲಿ ದಾಖಲೆ ನೀಡಿ ಹತ್ತಾರು ಬ್ಯಾಂಕ್ಗಳಲ್ಲಿ ಅಕೌಂಟ್ ತೆರೆದಿದ್ದರು. ಜನರಿಂದ ಹಣ ಪಡೆದ ಕೂಡಲೇ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ನಂತರ ಹಣ ಜಮಾ ಮಾಡಿದವರ ನಂಬರ್ ಬ್ಲಾಕ್ ಮಾಡ್ತಿದ್ರು. ಈ ಬಗ್ಗೆ ಬೆಂಗಳೂರು ಸೈಬರ್ ಠಾಣೆಗಳಲ್ಲಿ ಹಲವು ದೂರು ದಾಖಲಾಗಿದ್ದವು.
ವಿವಿಧ ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ಹಣ ವರ್ಗಾವಣೆ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸರು ಬೇನಾಮಿ ಹಣದ ಬಗ್ಗೆ ಇಡಿಗೆ ಮಾಹಿತಿ ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ನಾಲ್ವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರು ಇಡಿ ಕೋರ್ಟ್ ಗೆ ಹಾಜರುಪಡಿಸಿದ್ದು 7 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಲಾಗಿದೆ.