ಮನೆ ಜ್ಯೋತಿಷ್ಯ ಕಿರೀಟ ನವನಿಗಳು

ಕಿರೀಟ ನವನಿಗಳು

0

     ಇದು ಹೃದಯದ ಎರಡು ಮುಖ್ಯ ರಕ್ತನಾಳಗಳು. ಇದು ಹೃದಯ ಶಕ್ತಿಯುತವಾಗಿ ಕೆಲಸ ಮಾಡಲು ಅದರ ಮಾಂಸ ಖಂಡಗಳಿಗೆ  ಶುದ್ಧರಕ್ತವನ್ನು ನೀಡುತ್ತದೆ. ಒಂದು ವೇಳೆ ಹೃದಯ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡೆತಡೆಯಾದರೆ ಹೃದಯದ ಕೆಲಸವೇ ನಿಲ್ಲುತ್ತದೆ.ಇದರಿಂದ ಹೃದಯ ಸ್ತಂಭನವಾಗುತ್ತದೆ.ಈ ಶುದ್ಧರಕ್ತನಾಳಗಳಲ್ಲಿ ಶುದ್ಧವಾದ ಆಮ್ಲಜನಕಯುಕ್ತವಾದ ರಕ್ತ ಹೃದಯದ ಕವಟದಲ್ಲಿ ಹರಿದು,ಅಲ್ಲಿ ಸಂಗ್ರಹವಾದ ಕಲ್ಮಶಯುಕ್ತ ಅಶುದ್ಧ ರಕ್ತವನ್ನು ಮತ್ತೆ ಹೃದಯ ಹೃಕ್ತುಕ್ಷಿಗೆ ಸೇರಿಸುತ್ತದೆ.ಹೃದಯವು ಪ್ರತಿ ನಿಮಿಷಕ್ಕೆ ಮಾಡುತ್ತದೆ ಐದು ಲೀಟರ್ ರಕ್ತವನ್ನು ದೇಹದ ಅಂಗಾಂಗಗಳಿಗೆ ಪಂಪ್ ಮಾಡುತ್ತದೆ.ಆದರೆ ತನ್ನ ಆರೋಗ್ಯಕ್ಕೆ ಚಾಲನೆಗೆ ಬೇಕಾಗಿರುವಷ್ಟು ಮಾತ್ರ ರಕ್ತವನ್ನು ಈ ನಾಳಗಳಿಂದ ಪಡೆಯುತ್ತದೆ.

Join Our Whatsapp Group

 ಕವಾಟಗಳು

     ಈ ಹೃದಯದಲ್ಲಿ ರಕ್ತ ಸಂಚರಿಸಲು ನಾಲ್ಕು ಮುಖ್ಯ ಕವಾಟಗಳು ಸಹಾಯ ಮಾಡುತ್ತದೆ. ಈ ಕವಾಟಗಳು ಒಂದು ಕಡೆ ಮಾತ್ರ. ರಕ್ತ ಸಂಚರಿಸಲು ಅವಕಾಶವಾಗುವಂತೆ ತೆರೆದುಕೊಳ್ಳುವ ವಿಶೇಷ ಗುಣ ಹೊಂದಿದೆ.

1.  ಬಲ ಹೃಕ್ತುಕ್ಷಿಯಿಂದ ಬಲ ಹೃತ್ಕರ್ಣಕ್ಕೆ ಹೋಗುವ ಕವಾಟ

        ಇದು ಹೃದಯದ ಬಲಭಾಗದಲ್ಲಿ ಈ ಎರಡು ಕೋಣೆಗಳ ಮಧ್ಯೆ ಇರುತ್ತದೆ. ಈ ಕವಾಟ ತ್ರಿಕೋನ ಆಕೃತಿಯಲ್ಲಿ ಮೂರು ಬಾಗಿಲುಗಳನ್ನು ಹೊಂದಿದೆ. ಇದನ್ನು ತ್ರಿದಳ ಕವಾಟ ಎನ್ನುತ್ತಾರೆ.ಈ ಕವಾಟಗಳು ಬಲ ಭಾಗದ ಕೇಳ ಕೋಣೆಯ  ಮಾಂಸ ಖಂಡಗಳಿಂದ ನೆಲಕ್ಕೆ ಎತ್ತಿಡಲ್ಪಟ್ಟಿದೆ.

2. ಎಡರು ದೃಕ್ಷಿಯಿಂದ ಎಡ ಹೃತ್ಕರ್ಣಕ್ಕೆ ಹೋಗುವ ಕವಾಟ

.    ಬಲಭಾಗದಂತೆ ಎಡಬಾಗದಲ್ಲಿ  ಈ ಕವಾಟ ಎರಡು ಕೋಣೆಗಳ ಮಧ್ಯೆ ನಿಂತಿದೆ.ಆದರೆ ಇದು ಎರಡು ಎಲೆಯಾಕೃತಿಯಲ್ಲಿ ಬಾಗಿಲು ಹೊಂದಿದೆ ಇದನ್ನು ದ್ವಿದಳ ಕವಾಟ ಎನ್ನುವರು.

3. ಶ್ವಾಶಕೋಶದ ಅರ್ಥ ಚಂದ್ರಾಕೃತಿ ಕವಾಟ-

         ಇದು ಬಲಹೃತ್ಕರ್ಣ ದಲ್ಲಿ ಮೇಲ್ಭಾಗದಲ್ಲಿ ಜೆಬಿನ ಆಕೃತಿಯಲ್ಲಿ ಕವಟವಿರುತ್ತದೆ.

   ಈ ಕವಾಟದಿಂದ ಎರಡು ಕವಲಾಗಿ ಬಲ ಮತ್ತು ಎಡ ಶ್ವಾಸಕೋಶಗಳಿಗೆ ಅಶುದ್ಧರಕ್ತ   ಹರಿದು ಹೋಗುತ್ತದೆ.

4. ಶುದ್ಧರಕ್ತನಾಳದ ಅರ್ಧಚಂದ್ರಾಕೃತಿಯ ಕವಾಟ

     ಇದು ಎಡಹೃತ್ಕರ್ಷಣದ ಮೇಲುಭಾಗದಲ್ಲಿರುತ್ತದೆ.ಅರ್ಧಚಂದ್ರಾಕೃತಿಯಲ್ಲಿ ಜೇಬಿನಾ ಕೃತಿಯ ರೀತಿಯಲ್ಲಿರುತ್ತದೆ.