ಮನೆ ಅಪರಾಧ ಸಿ.ಟಿ. ರವಿ, ಯತ್ನಾಳ್‌, ಸೂಲಿಬೆಲೆ ವಿರುದ್ಧ ದೂರು ದಾಖಲು

ಸಿ.ಟಿ. ರವಿ, ಯತ್ನಾಳ್‌, ಸೂಲಿಬೆಲೆ ವಿರುದ್ಧ ದೂರು ದಾಖಲು

0

ಮಂಗಳೂರು: ಕೋಮು ಪ್ರಚೋದನೆ ಮಾಡಿದ್ದಾರೆ, ವಕ್ಫ್ ಆಸ್ತಿಯ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ, ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾಕ ವಿಭಾಗದ ವತಿಯಿಂದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಟಿ. ರವಿ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ದ ಶುಕ್ರವಾರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರಿಗೆ ದೂರು ಸಲ್ಲಿಸಲಾಯಿತು.

Join Our Whatsapp Group

ಕೋಮುದ್ವೇಷ ಹರಡಿಸಲು ಯತ್ನಿಸುತ್ತಿರುವ ಈ ಮೂವರ ವಿರುದ್ದವೂ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಯಿತು. ಸಾಹುಲ್‌ ಹಮೀದ್‌, ಆಲ್ವಿನ್‌ ಡಿ’ಸೋಜಾ, ಮಹಮ್ಮದ್‌ ಬಪ್ಪಾಲಿಗೆ, ಆಲ್ವಿನ್‌ ಪ್ರಕಾಶ್‌, ಥೋಮಸ್‌, ಚೆರಿಯನ್‌, ಹಬೀಬ್‌ ಕಣ್ಣೂರ್‌, ಜಾರ್ಜ್‌, ಇಮ್ರಾನ್‌ ಎ.ಆರ್‌. ಉಪಸ್ಥಿತರಿದ್ದರು.