ದಿನದ ಅಡುಗೆಯಲ್ಲಿ ಬಳಕೆಯಾಗುವ ಸುಪ್ರಸಿದ್ಧ ಸಾಂಬಾರ. ಗುಜರಾತ್ ರಾಜಸ್ಥಾನದಲ್ಲಿ ಜೀರಿಗೆಯು ವಿಪುಲವಾಗಿ ಬೆಳೆಯಲಾಗುತ್ತದೆ. ಸಪೂರ ಸರಿಗೆ ಆಕಾರ ಎಲೆ, ಬಿಳಿ ಹೂ, ಕೊಡೆಯ ಆಕಾರದ ಹೂ ಮಂಜರಿ, ಅನಂತರ ಉದ್ದ ಬೀಜ. ಜೀರಿಗೆಯಲ್ಲಿ ಸುಗಂಧಿ ತೈಲವಿದೆ. ಹಳದಿ ತೈಲಾಂಶವೊಂದು ಶೇ. 25ರಷ್ಟು ಉಪಲಭ್ಯ. ತೈಲದಲ್ಲಿ ಕ್ಯುಮಿನ್ ಅಲ್ಡಿಹೈಡು ಶೇ. 52ರಷ್ಟು ಇದೆ. ತೈಲವನ್ನು ಕೃತಕ ಥೈಮಾಲ್ ರೂಪದಲ್ಲಿ ಪರಿವರ್ತಿಸಬಹುದು. ಇದು ಉತ್ತಮ ಕೀಟಾಣು ವಿರೋಧಿ, ಬೀಜದಲ್ಲಿ ಸ್ಥಿರ ತೈಲ, ಫೆಂಟಾಸನ್ ಎಂಬ ರಾಸಾಯನಿಕಗಳಿವೆ.
ಜೀರಿಗೆ ಅತ್ಯಂತ ಸಮರ್ಥ ಪಾಚಕ. ವಾತದೋಷವನ್ನು ಅಧೋಬಾಗದಿಂದ ಹೊರ ಹಾಕುತ್ತದೆ. ಮೂತ್ರಸ್ರಾವ ಉತ್ತೇಜಕ, ನೋವು ನಿವಾರಕ, ಮಲಬದ್ಧತೆ, ವಾಂತಿ, ಬೇದಿ, ಅಜೀ,ರ್ಣ ಹೊಟ್ಟೆ ಉಬ್ಬರ, ಜ್ವರ, ಮೂತ್ರ ತೊಂದರೆ, ಮೂತ್ರ ಕಲ್ಲು, ಮೂತ್ರ ವಿರೋಧ, ಮಕ್ಕಳ ಅಜೀರ್ಣ ತೊಂದರೆಗೆ ರಾಮಬಾಣವಾಗಿದೆ.
ಔಷಧೀಯ ಗುಣಗಳು :-
* ಮೈ, ಕೈ, ನವೆ, ತುರಿ, ಕಜ್ಜಿ ಪರಿಹಾರಕ್ಕೆ ಜೀರಿಗೆಯ ಕಷಾಯದ ಸ್ನಾನ ಮಾಡುವುದರಿಂದ ತುಂಬಾ ಲಾಭದಾಯಕವಾಗಿದೆ.
* ಜ್ವರದಲ್ಲಿ ಜೀರ್ಣ ಶಕ್ತಿವರ್ಧಕ. ಮೂತ್ರ ಸರಾಗಗೊಳಿಸುತ್ತದೆ. ಉರಿ ಕಮ್ಮಿ ಮಾಡುತ್ತದೆ. ಜೀರಿಗೆ ಪುಡಿ ಮತ್ತು ಬೆಲ್ಲ ಬೆರೆಸಿ ಸೇವಿಸುವುದರಿಂದ ಹಿತಕಾರಿಯಾಗಿದೆ.
* ಬೇಧಿ ನಿಲ್ಲಿಸಬೇಕಾದರೆ ಮೊಸರಿನ ಸಂಗಡ ಜೀರಿಗೆ ಪುಡಿಯ ಸೇವನೆ ಹಿತಕಾರಿಯಾಗಿದೆ.
* ಹೆರಿಗೆ ಅನಂತರದಲ್ಲಿ ಜೀರಿಗೆ ಪುಡಿ ಸೇವಿಸಿದರೆ ಎದೆ ಹಾಲು ಹೆಚ್ಚುತ್ತದೆ.
* ಬಿಕ್ಕಳಿಕೆ, ಎದೆ ಉರಿ ಪರಿಹಾರಕ್ಕೆ ಜೀರಿಗೆ ಪುಡಿ ಸಂಗಡ ತುಪ್ಪ ಕೂಡಿಸಿ ಸೇವಿಸಬಹುದು ಅಥವಾ ಪುಡಿಯನ್ನು ತುಪ್ಪದಲ್ಲಿ ಕಲಸಿ ಒಣ ವೀಳ್ಯದೆಲೆಯಲ್ಲಿ ಸುರುಳಿ ಸುತ್ತಿ ಹೊಗೆ ಬತ್ತಿ ರೂಪದಲ್ಲಿ ಸೇವಿಸಬಹುದು.
* ದನಿ ಕುಗ್ಗಿದಾಗ ಮತ್ತು ಹಾವು ಕಡಿತದ ಪ್ರಥಮ ಚಿಕಿತ್ಸೆಯಾಗಿ ಜೀರಿಗೆ ಬಳಸುವುದರಿಂದ ಲಾಭವಿದೆ.
* ಜೀರಿಗೆ ಸಂಗಡ ಕಾಸಿದ ತೈಲ ಹಚ್ಚಿ ಚರ್ಮರೋಗ ಪರಿಹಾರ ಸಾಧ್ಯ.