ಮನೆ ಸ್ಥಳೀಯ ಸದರನ್ ಸ್ಟಾರ್ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ಹಣ ಪಾವತಿಸದೆ ವಂಚಿಸಿದ ಗ್ರಾಹಕ: ದೂರು...

ಸದರನ್ ಸ್ಟಾರ್ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ಹಣ ಪಾವತಿಸದೆ ವಂಚಿಸಿದ ಗ್ರಾಹಕ: ದೂರು ದಾಖಲು

0

ಮೈಸೂರು: ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಐಷಾರಾಮಿ ಸದರನ್ ಸ್ಟಾರ್ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ಹಣ ಪಾವತಿಸದೆ ಗ್ರಾಹಕನೊಬ್ಬ ವಂಚಿಸಿ ಎಸ್ಕೇಪ್ ಆದ ಪ್ರಕರಣ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹಾಸನ ತಾಲೂಕು ಚೆನ್ನರಾಯಪಟ್ಟಣ ತಾಲೂಕಿನ ರಂಜನ್ ಎಂಬಾತನ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಹೋಟೆಲ್ ನ ಮ್ಯಾನೇಜರ್ ಕರಿಯಪ್ಪ ಎಂಬುವರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ರಂಜನ್ ಸದರನ್ ಸ್ಟಾರ್ ಹೋಟೆಲ್ ಹಳೇ ಗ್ರಾಹಕ.2021 ರಿಂದ ಆಗಾಗ ಬಂದು ತಿಂಗಳುಗಳ ಕಾಲ ತಂಗುತ್ತಿದ್ದರು.ಪ್ರತಿಬಾರಿ ಹಣ ಪಾವತಿಸುತ್ತಿದ್ದ ರಂಜನ್ ಈ ಬಾರಿ ಸುಮಾರು 20 ದಿನಗಳ ಬಾಡಿಗೆ ಪಾವತಿಸದೆ ಎಸ್ಕೇಪ್ ಆಗಿದ್ದಾರೆ. ಮೊಬೈಲ್ ಗೆ ಫೋನ್ ಮಾಡಿದ್ರೆ ಸ್ವಿಚ್ ಆಫ್ ಬಂದಿದೆ.

1,55,052/ ರೂ ಬಾಡಿಗೆ ಬಾಕಿ ಉಳಿಸಿಕೊಂಡು ಹೇಳದೆ ಕೇಳದೆ ನಾಪತ್ತೆಯಾದ ರಂಜನ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.