ಮನೆ ಹವಮಾನ ಕೇರಳದಲ್ಲಿ ರೆಮಲ್‌ ಚಂಡಮಾರುತದ ಆರ್ಭಟ ಜೋರು: ಭಾರೀ ಮಳೆ

ಕೇರಳದಲ್ಲಿ ರೆಮಲ್‌ ಚಂಡಮಾರುತದ ಆರ್ಭಟ ಜೋರು: ಭಾರೀ ಮಳೆ

0

ತಿರುವನಂತಪುರ: ಈಶಾನ್ಯ ಭಾರತದಲ್ಲಿ ರೆಮಲ್‌ ಚಂಡಮಾರುತದ ಅವಾಂತರ ಮುಂದುವರಿದಿದ್ದು, ಇತ್ತ ಕೇರಳದಲ್ಲೂ ವರುಣನ ಆರ್ಭಟ ಹೆಚ್ಚಾಗಿದೆ.

Join Our Whatsapp Group

ಸತತ 2 ದಿನಗಳಿಂದ ಸುರಿಯುತ್ತಿರುವ ಮಳೆಗೆ ತಿರುವನಂತಪುರ ತತ್ತರಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಕಟ್ಟಕ್ಕಾಡದಲ್ಲಿ ಕೋಳಿ ಫಾರ್ಮ್ಗೆ ನೀರು ನುಗ್ಗಿ 5,000 ಕೋಳಿಗಳು ಸಾವನ್ನಪ್ಪಿವೆ. ಕೊಲ್ಲಮ್‌, ಪತ್ತನಂತಿಟ್ಟ, ಆಳಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲೂ ಮಳೆಯಾಗುತ್ತಿದ್ದು, 7 ಜಿಲ್ಲೆಗಳಿಗೂ ಐಎಂಡಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಮಣಿಪುರದಲ್ಲಿಯೂ ಮಳೆಯಿಂದ 4,000ಕ್ಕೂ ಅಧಿಕ ಮಂದಿಗೆ ತೊಂದರೆಯಾಗಿದೆ.

ಕೇರಳಕ್ಕೆ ಇಂದೇ ಮುಂಗಾರು

ಕೇರಳಕ್ಕೆ ಇಂದೇ ಮುಂಗಾರು ಮಳೆ ಪ್ರವೇಶವಾಗುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆಯೇ ಮಾಹಿತಿ ನೀಡಿದೆ. ಮುಂದಿನ 24 ಗಂಟೆಗಳ ಒಳಗಾಗಿ ಮುಂಗಾರು ಪ್ರವೇಶವಾಗುವ ಬಗ್ಗೆ ಎಲ್ಲ ಅನುಕೂಲ ಪರಿಸ್ಥಿತಿಗಳು ಇವೆ ಎಂದಿದೆ.

ಹಿಂದಿನ ಲೇಖನಬೀದರ್: ಸಿಪಿಐ ಮೇಲೆ ಚಾಕುವಿನಿಂದ ಹಲ್ಲೆ- ರೌಡಿಶಿಟರ್ ಕಾಲಿಗೆ ಗುಂಡೇಟು
ಮುಂದಿನ ಲೇಖನಹೈಕೋರ್ಟ್ ವಕೀಲೆ ಚೈತ್ರಾ ಅನುಮಾನಾಸ್ಪದ ಸಾವು ಪ್ರಕರಣ: ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿದೆ