ಮನೆ ಸುದ್ದಿ ಜಾಲ ಸಿಲಿಂಡರ್‌ ಸ್ಪೋಟ ಕೇಸ್‌; 20 ಅಡಿ ದೂರದಲ್ಲೇ ಸಿಸಿಟಿವಿ ಇದ್ರೂ ಸ್ಫೋಟದ ದೃಶ್ಯ ಸೆರೆಯಾಗಿಲ್ಲ..!

ಸಿಲಿಂಡರ್‌ ಸ್ಪೋಟ ಕೇಸ್‌; 20 ಅಡಿ ದೂರದಲ್ಲೇ ಸಿಸಿಟಿವಿ ಇದ್ರೂ ಸ್ಫೋಟದ ದೃಶ್ಯ ಸೆರೆಯಾಗಿಲ್ಲ..!

0

ಮೈಸೂರು : ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ನಡೆದ ಸಿಲಿಂಡರ್ ಸ್ಪೋಟ ಪ್ರಕರಣದಿಂದ ಅರಮನೆಯ ಭದ್ರತಾ ವೈಫಲ್ಯ ಬಟಬಯಲಾಗಿದೆ. ಸ್ಪೋಟ ಸಂಭವಿಸಿದ 20 ಅಡಿ ದೂರದಲ್ಲೇ ಅಧುನಿಕ ತಂತ್ರಜ್ಞಾನದ ಸಿಸಿಟಿವಿ ಹಾಕಲಾಗಿದೆ. ಆದರೆ ಈ ಸಿಸಿಟಿವಿಯಲ್ಲಿ ಸ್ಫೋಟದ ದೃಶ್ಯವೇ ಸೆರೆಯಾಗಿಲ್ಲ.

ಮೈಸೂರು ಅರಮನೆಗೆ ವರ್ಷದಿಂದ ವರ್ಷಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅರಮನೆಯ ಆವರಣ ಮತ್ತು ಸುತ್ತಮುತ್ತಲಿನ ರಸ್ತೆಯಲ್ಲಿ ಸಿಸಿಟಿವಿ ಹಾಕಲಾಗಿದೆ. ಅದರಲ್ಲೂ ಸ್ಫೋಟ ಸಂಭವಿಸಿದ ಜಾಗದ ಸುಮಾರು 20 ಅಡಿ ದೂರದಲ್ಲಿ 360 ಡಿಗ್ರಿ ಸಿಸಿಟಿವಿಯನ್ನು ಹಾಕಲಾಗಿದೆ. ಆದರೆ ಈ ಸಿಸಿಟಿವಿಯಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿಲ್ಲ.

ಈ ಸ್ಪೋಟದ ಮೂಲಕ ಅರಮನೆಯ ಭದ್ರತಾ ವೈಫಲ್ಯ ಬಟಬಯಲಾಗಿದೆ. ಭದ್ರತೆ ವಿಚಾರದಲ್ಲಿ ಅರಮನೆ ಆಡಳಿತ ಮಂಡಳಿಗೆ ಇರುವ ನಿರ್ಲಕ್ಷ್ಯ ಎಂಥದ್ದು ಎನ್ನವುದು ಈ ಪ್ರಕರಣದಿಂದ ಸಾಬೀತಾಗಿದೆ.