ಮನೆ ಮನೆ ಮದ್ದು ಭದ್ರ ಮುಷ್ಠಿ

ಭದ್ರ ಮುಷ್ಠಿ

0

ಕೊನ್ನಾರಿ ಗೆಡ್ಡೆ, ಭದ್ರಮುಷ್ಟಿಯದು ಒಂದೇ ಕುಲ. ಒಂದೇ ರೀತಿಯಾಗಿ ಜವುಗು ನೆಲ, ನೀರಾಸರೆಯ ಗದ್ದೆ, ಗದ್ದೆ ಬದು, ನದಿ, ಕಾಲುವೆ ಅಂಚು, ಕೆಸರು ಭೂಮಿಯಲ್ಲಿ ಬೆಳೆಯುವಂಥವು ಆದರೆ ಹುಲ್ಲುಗರಿ, ದಂಟಿನ ಗಾತ್ರ ಮತ್ತು ಗೆಡ್ಡೆ ಗಾತ್ರ ಮಾತ್ರ ನಾಗರ ಮುಷ್ಟಿಯದು ತುಂಬಾ ಹಿರಿದು. ಗೆಡ್ಡೆಯು ನೆಲದಡಿ ಹರಡುತ್ತಾ ಮತ್ತೊಂದು ಕವಲು ಸಸಿಯಾಗಿ ಎಲೆ, ದೇಟು ಚಿಗುರಿಸಿಕೊಳ್ಳುತ್ತದೆ. ದಂಟಿನ ತುದಿಯಲ್ಲಿ ತ್ರಿಕೋನಾಕಾರದ ಹೂ ಮಂಜರಿ.

ಅನಂತರ ಕಿರಿಯ ಬೀಜಗಳಾಗುವ ಸ್ವಭಾವ. ಎಲೆಯು ಕೊನ್ನರಿ ಎಲೆಗಿಂತ ಅಗಲ ಮತ್ತು ಗಟ್ಟಿಮುಟ್ಟಾಗಿರುತ್ತದೆ. ಹಾಗಾಗಿ ಚಾಪೆ ಹಣೆಯಲು ನಾಗರ ಮುಷ್ಟಿಯ ಎಲೆದೇಟು ಚಿಗುರಿಸಿಕೊಳ್ಳುತ್ತದೆ. ದಂಠಿನ ತುದಿಯಲ್ಲಿ ತ್ರೀಕೋನಾಕಾರದ ಹೂ ಮಂಜರಿ.

ಅನಂತರ ಕಿರಿಯ ಬೀಜಗಳಾಗುವ ಸ್ವಾಬಾವ. ಎಲೆಯು ಕೊನ್ನಾರಿ ಎಲೆಗಿಂತ ಅಗಲ ಮತ್ತು ಗಟ್ಟಿಮುಟ್ಟಗಿರುತ್ತದೆ. ಹಾಗಾಹಿ ಚಾಪೆ ಹೆಣೆಯಲು ನಾಗರ ಮುಷ್ಟಿಯ ಎಲೆದೇಟು ಬಳಕೆಯಾಗುತ್ತದೆ.      ಕೊನ್ನಾರಿ ಮತ್ತು ಭದ್ರಮುಷ್ಟಿಯ ರಾಸಾಯನಿಕ ಸಂಘಟನೆಯ ಸಮಾನವಾಗಿದೆ. ಆದರೆ ಲಭ್ಯವಿರುವ ತೈಲಾಂಶ, ಸುಗಂಧಿ ತತ್ವ ಕೊನ್ನಾರಿಗಿಂತ ಅಧಿಕವಾಗಿರುತ್ತದೆ. ಹಾಗಾಗಿ ತೈಲಾಂಶ ಬೇರ್ಪಡಿಸುವ ಸುಗಂಧಿ ಉದ್ದಿಮೆಗಳು ಭದ್ರಮುಷ್ಟಿ ತೈಲವೆಂದು ಗೆಡ್ಡೆ ತೈಲವನ್ನು ಮಾರುಕಟ್ಟೆಗೆ ಅಣಿಗೊಳಿಸುತ್ತದೆ. ತೈಲಾ ತೆಗೆದು ಉಳಿದ ಚರಟವನ್ನು ಅಗರಬತ್ತಿ ತಯಾರಿಕೆಗೆ ಅಂಟಿನ ಜೊತೆ ಸೇರಿಸಲಾಗುತ್ತದೆ.

ಔಷಧೀಯ ಗುಣಗಳು :-

* ಚರ್ಮರೋಗಕ್ಕೆ ನವೆ ತೊಂದರೆಗೆ ಅರೆದು ಲೇಪ ಮಾಡಿದರೆ ಚರ್ಮ ರೋಗವು ಗುಣವಾಗುವುದು.

* ಪದೇ ಪದೇ ಕಾಡುವ ಭೇದಿ, ಆಮಶಂಕೆ, ಹೊಟ್ಟೆ ನೋವಿಗೆ ಭದ್ರ ಮುಷ್ಟಿಯ ಪುಡಿ ಬಳಸುವುದರಿಂದ ಗುಣಕಾರಿಯಾಗಿದೆ.

* ಪಿತ್ತ ಜ್ವರ, ಬಾಣಂತಿ ಜ್ವರಕ್ಕೆ ಮುಷ್ಟಿಚೂರ್ಣ, ಕಷಾಯ ಬಳಸಬಹುದು. ಎದೆ ಹಾಲು ಶುದ್ಧವಾಗಲು, ಹೆಚ್ಚಾಗಲು ಸಹಕಾರಿ ಗೆಡ್ಡೆ ಹರಿದು ಎದೆಗೆ ಲೇಪಿಸುವುದರಿಂದ ಕೂಡ ಲಾಭವಿದೆ.