ನಂಜನಗೂಡು: ಯುದ್ಧಪೀಡಿತ ಇಸ್ರೇಲ್ ದೇಶದಲ್ಲಿ ನೆಲೆಸಿರುವ ತಾಲ್ಲೂಕಿನ ದೇವನೂರು ಗ್ರಾಮದ ಡಿ.ಎಸ್.ಚೇತನ್ ಕುಟುಂಬ ಸುರಕ್ಷಿತವಾಗಿದೆ.
ಸೆಂಟ್ರಲ್ ಇಸ್ರೇಲ್ ನ ರೆಹೋವತ್ ನಗರದ ಬಾಡಿಗೆ ಮನೆಯಲ್ಲಿ ಡಿ.ಎಸ್.ಚೇತನ್, ಪತ್ನಿ ಶಿಲ್ಪಶ್ರೀ ಹಾಗೂ ಒಂದೂವರೆ ವರ್ಷದ ಮಗ ಉತಾಷ್ ಜತೆ ನೆಲೆಸಿದ್ದು, ಆ ಪ್ರದೇಶದಲ್ಲಿ ಯಾವುದೇ ಯುದ್ಧದ ಭೀತಿ ಇಲ್ಲದಿದ್ದರೂ ಸುರಕ್ಷತೆ ದೃಷ್ಟಿಯಿಂದ ಎಲ್ಲರೂ ಮನೆಯಲ್ಲೇ ನೆಲೆಸಿದ್ದಾರೆ ಎಂದು ಚೇತನ್ ಕುಟುಂಬದವರು ತಿಳಿಸಿದ್ದಾರೆ.
ಡಿ.ಎಸ್.ಚೇತನ್ ಪುಣೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಎಜುಕೇಷನ್ ರಿಸರ್ಚ್ ಸೆಂಟರ್ ನಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪಡೆದಿದ್ದು, ಇದೇ ವಿಷಯದಲ್ಲಿ ಸಂಶೋಧನೆಗಾಗಿ ಕಳೆದ ಎರಡು ವರ್ಷದ ಹಿಂದೆ ಇಸ್ರೆಲ್ ಗೆ ತೆರಳಿದ್ದರು. ಕಳೆದ ವರ್ಷ ಪತ್ನಿ ಹಾಗೂ ಮಗನನ್ನು ಕರೆಸಿಕೊಂಡಿದ್ದರು ಎನ್ನಲಾಗಿದೆ.