ಮನೆ ಪೌರಾಣಿಕ ದಕ್ಷನ ವಂಶಾಭಿವೃದ್ಧಿ : ಭಾಗ 4

ದಕ್ಷನ ವಂಶಾಭಿವೃದ್ಧಿ : ಭಾಗ 4

0

   ಕ್ಯಾಶಪ್ಪ ಪ್ರಜಾಪತಿಯ ಪತ್ನಿಯರಲ್ಲಿ ಅಧಿತಿಗೆ  ಶುಕ್ರನು,ಚಕ್ರಧರನು ಹುಟ್ಟಿದನು.ಚಾಕ್ಷುಷ ಮನ್ವಂತರದ ಕಾಲದಲ್ಲಿ ತುಷಿತರೆಂದು ಮುನ್ನಣೆಯನ್ನು ಪಡೆದ 12 ದೇವತೆಗಳೂ, ವೈವಸ್ವತ ಮನ್ವಂತರದಲ್ಲಿ ಅತಿಥಿಯ ಗರ್ಭದಲ್ಲಿ ದ್ವಾದಶಾಧಿಪತಿಗಳಾಗಿ ಜನಿಸಿದರು.ಚಾಕ್ಷುಷ ಮನ್ವಂತರದಲ್ಲಿ ಇವರ ಹೆಸರುಗಳು ಆರ್ಯಮ, ದಾತ, ತ್ವಷ್ಟ,ಪೂಷ, ರವಿ,ವಿವಸ್ವಂತ, ಸವಿತ, ಮಿತ್ರ,ವರುಣ,ಅಂಶ,ತೇಜ, ದಕ್ಷನ ಜಾಮಾತ  ಬಹುಪುತ್ರನಿಗೆ ನಾಲ್ವರು ಹೆಣ್ಣು ಮಕ್ಕಳು ಶಾಂಪಾ, ಲತಾಂಗನೆಯರಾದರು ಅವರ ವರ್ಣಗಳು ಗೋದಿಬಣ್ಣ,  ಕೆಂಪು, ಅರಿಶಿನ, ಬಿಳುಪು, ಅಂಗೀರಸ ಮಹರ್ಷಿಕೆ ರುಚೀಕನು ಹುಟ್ಟಿದನು. ಕೃತಾಶ್ವ ಮಹರ್ಷಿಗೆ ದೈವ ಪದವನ್ನು ಅಧಿರೋಹಿಸಿದ ಪುತ್ರರು ಜನಿಸಿದರು.

Join Our Whatsapp Group

   ಈ ರೀತಿಯಾಗಿ ಶ್ರೀ ಮಹಾವಿಷ್ಣುರ ವರಪ್ರಸಾದದಿಂದ ಪ್ರಜಾಪತಿ ಧರ್ಮವನ್ನು ಸ್ವೀಕರಿಸಿದ ದಕ್ಷ ಪ್ರಾಜಾಪತಿಯ ವಂಶವು ವಂಶವೃದ್ದಿಯನ್ನು ಹೊಂದಿತು.

    ವ್ಯಾಸ ಮಹರ್ಷಿಯ ಪ್ರಸಾದದಿಂದ ವಾದ ಅಷ್ಟಾದಶ ಪುರಾಣಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಸರಿ ತುಲನಾತ್ಮಕ ವಿವೇಕನಂದ ಪರಿಶೀಲಿಸಿದರೆ ವಿವಿಧ ವಂಶನುಕ್ರಮಗಳಲ್ಲಿ ಕಾಣಿಸುತ್ತಿರುವ ಪರಸ್ಪರ ವಿಭೇದಗಳನ್ನು ಓದುಗರು ಈಗಾಗಲೇ  ಗುರುತಿಸುತ್ತಾರೆ.

     ಪುರಾಣಗಳಲ್ಲಿ ವಿಷ್ಣು, ನಾರದೀಯ, ಭಾಗವತ, ಗಾರುಡ, ಪದ್ಮಾವಾರಾಹಾ ಪುರಾಣಗಳೆಲ್ಲವೂ ಶ್ರೀಮನ್ನಾರಾಯಣ ಪ್ರಶಂಸಾತ್ಮ ಕಗಳೇ ಆಗಿವೆ. ಆದ್ದರಿಂದಲೇ ಇವುಗಳಲ್ಲಿ ಅನೇಕ ಕಥೆಗಳಿವೆ, ಈ ಕಥಾ ಸಂದರ್ಭದಿಂದಲ್ಲೆ ಮತ್ಸ್ಯ ವಾಯು, ಬ್ರಹ್ಮಾಂಡ, ವಾಮನ ಪುರಾಣಗಳಲ್ಲಿ ವಂಶಾನು ಚರಿತ್ರೆಯ ವರ್ಣನೆಗಳೂ  ಸಹ ವಿಷ್ಣು ಪುರಾಣದಲ್ಲಿ ಕೆಲವು ಕಡೆಗಳಲ್ಲಿ ಹೋಲಿಕೆಯಾಗಿವೆ. ನಮಗೆ ಲಭಿಸಿರುವ ವಿಷ್ಣು ಪುರಾಣ ಲಿಖಿತ ಪತ್ರಗಳಲ್ಲಿಯೂ ಮುದ್ರಿತ ಪ್ರತಿಕಳಲ್ಲಿಯೂ, ಈ ಈ ವಂಶಾನುಕ್ರಮದಲ್ಲಿ ಪ್ರಸ್ತಾಪಿಸಿದ್ದ ಹೆಸರುಗಳಲ್ಲಿ ಅನೇಕ ವ್ಯತ್ಯಾಸಗಳು ಇದ್ದು ಕಾಣುತ್ತಿವೆ. ಪುರಾಣ ಪ್ರತಿಗಳಲ್ಲಿನ ಸಂದೇಹಗಳನ್ನು ಪರಿಷ್ಕರಿಸಿಕೊಳ್ಳಲಿಕ್ಕಾಗಿ ಇತರೆ ಪುರಾಣಗಳಲ್ಲಿನ ವಿವರಗಳನ್ನು ಯಥಾತಥೋವಾಗಿಯೂ ಅಥವಾ ಕೆಲವು  ಯುಕ್ತವಾದ  ಬದಲಾವಣೆಗಳೊಂದಿಗೂ ಸ್ವೀಕರಿಸುವುದರಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಗುತ್ತಿದೆ.ನನ್ನ ಈ ರಚನೆಗೆ ಕೆಲವು ಪುರಾಣ ಕಥೆಗಳು ಸಹಕರಿಸಿದ್ದರೂ ಅವುಗಳಲ್ಲಿಯೂ ಸಹ ಪರಸ್ವರ ವೈರು ದ್ಯ ವಾಕ್ಯಗಳು ಹಲವಾರು ಕಡೆಗಳಲ್ಲಿ ಗೋಚರಿಸಲ್ಪಟ್ಟವೆ. ಅದರೂ ಸಹ ನನಗೆ ಲಭಿಸಿದ ಕೆಲವು ಗ್ರಂಥಗಳ  ಸಹಾಯದಿಂದ   ಓದುಗರ ಸೌಕರ್ಯಕ್ಕೋಗಿ ದಕ್ಷನ ವಂಶಾನುಕ್ರಮವನ್ನು  ಇಲ್ಲಿ ಕೊಡಲಾಗಿದೆ ಮಹಾವಿಷ್ಣು ನಾಭೀ  ಕಮಲದಿಂದ ಬ್ರಹ್ಮನು ಉದಯಿಸಿದನು. ಆತನಿಂದ 23 ಪ್ರಜಾಪತಿಗಳು,ಮಾನವರು,ಮಹರ್ಷಿಗಳು ಭ ಹುಟ್ಟಿ ಮಾನವನ ಸತತಿಯನ್ನು ಅಭಿವೃದ್ಧಿಪಡಿಸಿದರು.