ಮನೆ ಸ್ಥಳೀಯ ದಲೈಲಾಮಾ ಶಾಂತಿ, ಸೌಹಾರ್ದತೆಯ ಸಂಕೇತ: ಸಚಿವ ಕೆ.ವೆಂಕಟೇಶ್

ದಲೈಲಾಮಾ ಶಾಂತಿ, ಸೌಹಾರ್ದತೆಯ ಸಂಕೇತ: ಸಚಿವ ಕೆ.ವೆಂಕಟೇಶ್

0

ಬೈಲುಕುಪ್ಪೆಯಲ್ಲಿ ಬೌದ್ಧ ಸನ್ಯಾಸಿ ದಲೈಲಾಮಾ 90 ನೇ ಹುಟ್ಟು ಹಬ್ಬ.

ಪಿರಿಯಾಪಟ್ಟಣ. ಬೌದ್ಧ ಗುರು ದಲೈ ಲಾಮರವರು ಶಾಂತಿ ಸೌಹಾರ್ದತೆ ಸಂಕೇತ ವಾಗಿದ್ದಾರೆ ಎಂದು ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು. ತಾಲೂಕಿನ ಬೈಲಕುಪ್ಪೆ ಟಿಡಿಎಲ್ ಕೇಂದ್ರದಲ್ಲಿ 14ನೇ ಬೌಧ ಗುರು ದಲೈ ಲಾಮಾ ರವರ 90ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ದಲೈಲಾಮ ರವರು ಅವರ ಜೀವನವಿಡಿ ಕರುಣೆಯ ಶಾಸ್ತ್ರವನ್ನು ಅಭ್ಯಾಸ ಮಾಡಿ ಪ್ರಪಂಚಕ್ಕೆ ಉಪದೇಶ ನೀಡುವ ಮೂಲಕ ವಿಶ್ವದಾದ್ಯಂತ ಶ್ರೇಷ್ಠ ಧಾರ್ಮಿಕ ನಾಯಕರೆಂದು ಗುರುತಸಲ್ಪಟ್ಟಿದ್ದಾರೆ ಅವರ ನಾಲ್ಕು ಪ್ರಮುಖ ಬದ್ಧತೆಗಳು ಮಾನವ ಮೌಲ್ಯಗಳು ಪ್ರಸಾರ ಧಾರ್ಮಿಕ ಸಾಮರ್ಥ್ಯ ಟಿಬೆಟ್ ಧರ್ಮ ಮತ್ತು ಸಾಂಸ್ಕೃತಿಯ ಸಂರಕ್ಷಣೆ ಹಾಗೂ ಭಾರತೀಯ ಪ್ರಾರ್ಥನೆ ದಾನಗಳ ಪುನರುತ್ಥಾನ ಇವರು ಕಾರ್ಯಕ್ರಮಗಳ ಮುಖಾಂತರ ಜಗತ್ತಿಗೆ ಹರಡಿದ್ದಾರೆ. ದಯೆ ಮತ್ತು ಕರುಣೆ ದೃಷ್ಟಿಕೋನವನ್ನು ಗೌರವಿಸಲು ಟಿಬೆಟ್ ಆಡಳಿತವು ಈ ವರ್ಷವನ್ನು ಕರುಣೆ ವರ್ಷವೆಂದು ಘೋಷಿಸಲ್ಪಟ್ಟಿದೆ ಈ ಸಂದರ್ಭದಲ್ಲಿ ಎಲ್ಲಾ ಟಿಬೇಟ್ ಜನರು ಮತ್ತು ಅಭಿಮಾನಿಗಳು ತಮ್ಮ ಸಮುದಾಯಗಳಲ್ಲಿ ಪಟ್ಟಣಗಳಲ್ಲಿ ಹಳ್ಳಿಗಳಲ್ಲಿ ಸ್ನೇಹಿತರೊಂದಿಗೆ ಹಾಗು ಸಂಘ ಸಂಸ್ಥೆಗಳ ಮುಖಾಂತರ ಕರುಣೆಯ ಮೌಲ್ಯಗಳನ್ನು ಹಂಚಿಕೊಳ್ಳಲು ವಿಶೇಷವಾಗಿ ಯುವ ಪೀಳಿಗೆಯೊಂದಿಗೆ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಇಂದಿನ ಜಗತ್ತಿನಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳ ಕಾಲದಲ್ಲಿ ಹಿಂಸಾತ್ಮಕ ಸಂಘರ್ಷ ಅತ್ಯಾಯುದ ಶಸ್ತ್ರ ಸ್ಪರ್ಧೆ ಸತ್ಯದ ಶಸ್ತ್ರ ಸ್ಪರ್ಧೆ ವ್ಯಾಪಾರ ಸಂಘರ್ಷ ಸಾಮಾಜಿಕ ವಿಭಜನೆ ನೈತಿಕ ಅದೋಗತಿ ಮತ್ತು ಹವಾಮಾನ ಬದಲಾವಣೆ ನಡೆವೆ ಈ ನಾಲ್ಕು ಭದ್ರತೆಗಳು ಅಪೂರ್ವ ಪರಿಹಾರ ಮಾರ್ಗಗಳನ್ನು ನೀಡುತ್ತವೆ. ಟಿಬೆಟ್ ಸಮುದಾಯವು ವಿಶ್ವದಲ್ಲಿ ಅತ್ಯುತ್ತಮ ಶರಣಾರ್ಥಿ ಸಮುದಾಯವೆಂದು ಗುರುತಿಸಲ್ಪಟ್ಟಿದೆ ಇದು ದಲೈಲಾಮ ಕರುಣೆಯ ಶಾಸ್ತ್ರದ ಶಕ್ತಿ ಮತ್ತು ಮಾರ್ಗದರ್ಶನ ಪರವಾಗಿದೆ. ಟಿಬೆಟ್ ಒಳನಾಡಿನಲ್ಲಿ ಚೀನಾ ಸರ್ಕಾರ ತಮ್ಮ ಸಹೋದರರನ್ನು ಅವರ ಧರ್ಮ ಆಚರಣೆಗೆ ಅವಕಾಶ ನೀಡದೆ ತಡೆಯುತ್ತಿದೆ ಆದರೆ ಭಕ್ತರ ಹೃದಯದಲ್ಲಿ ಗುರು ಶಿಷ್ಯ ಸಂಬಂಧವು ಯಾವ ಒತ್ತಡಕ್ಕೂ ಶರಣಾಗುವುದಿಲ್ಲ ಎಂದು ನಾವು ಆಶಿಸುತ್ತೇವೆ ಒಂದೇ ದಿನದಲ್ಲಿ ಟಿಬೆಟ್ ಜನರು ಹಾಗೂ ನೀವು ಜನ್ಮದಿನವನ್ನು ಆಚರಿಸಬಲ್ಲ ಶಕ್ತಿಯನ್ನು ಹೊಂದಿದ್ದೀರಿ. ದಲೈಲಾಮ ರವರು ಲಕ್ಷಾಂತರ ಜನರ ಒಳಿತಿಗಾಗಿ 100 ಯುಗಗಳವರೆಗೂ ಆಯುಷ್ಯವಿರಲಿ ಎಂದು ಪ್ರಾರ್ಥಿಸುತ್ತೇನೆ ಅವರ ಎಲ್ಲಾ ಪವಿತ್ರ ಆಶಯಗಳು ಯಶಸ್ವಿಯಾಗಿ ಪೂರೈಸಲ್ ಪಡಲಿ ನಾವು ಎಲ್ಲರೂ ಅವರ ಬೋಧನೆಗಳನ್ನು ಅನುಸರಿಸಿ ಪ್ರೀತಿಯಿಂದ ಏಕತೆಯಿಂದ ಈ ದೇಶದಲ್ಲಿ ಮುಂದುವರೆಯೋಣ ಹಾಗೂ ಮುಂದಿನ ಪೀಳಿಗೆಗೆ ಶಾಂತಿ ಸಂದೇಶವನ್ನು ಬಳುವಳಿ ನೀಡೋಣ ಎಂದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಬಿ ಎ ಪ್ರಕಾಶ್, ಮುಖಂಡರಾದ ಈರಯ್ಯ, ಜೆಪಿ ಅರಸ್, ಸಚಿನ್, ಜಯಚಂದ್ರ, ವಕೀಲರಾದ ಭಾಸ್ಕರ್, ದಿನೇಶ್, ವಲಯ ಅರಣ್ಯ ಅಧಿಕಾರಿ ಪದ್ಮಶ್ರೀ, ಕರ್ನಲ್ ಅಮಜಿತ್ ಸಿಂಗ್, ಟಿಡಿಎಲ್ ಸಂಸ್ಥೆ ಅಧಿಕಾರಿಗಳಾದ ಚಿಮಿ.ಗೋಲಿಕ್ ಜಂಗನೇರಿ, ಗೋಟೌನ್ ಆರ್ಗನೈಸಿಂಗ್ ಕಮಿಟಿ ಆಫ್ ಬೈಲಕೊಪ್ಪ ಶಟಲ್ಮೆಂಟ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಟಿಬೆಟಿಯನೂರು ಉಪಸ್ಥಿತರಿದ್ದರು.