ಚೆನ್ನೈ: ಕಾಲಿವುಡ್‌ನಲ್ಲಿ ದಳಪತಿ ವಿಜಯ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ʼಗೋಟ್ʼ ಸಿನಿಮಾ ಕ್ರೇಜ್ ಹುಟ್ಟಿಸಿತ್ತು.
ಸೆ.5 ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗಿದ್ದ ʼಗೋಟ್ʼಗೆ ಎಂದಿನಂತೆ ವಿಜಯ್ ಅಭಿಮಾನಿಗಳ ಫಿದಾ ಆಗಿದ್ದರು. ಆದರೆ ಉಳಿದ ಪ್ರೇಕ್ಷಕರಿಂದ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಿಶ್ರ ಪ್ರತಿಕ್ರಿಯೆ ಕೇಳಿ ಬಂದರೂ ವಿಶ್ವದಾದ್ಯಂತದ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಭಯೋತ್ಪಾದನೆ ವಿರುದ್ಧ ಹೋರಾಟದ ಕಥೆಯನ್ನು ವೆಂಕಟ್ ಪ್ರಭು ಸಿನಿಮಾದಲ್ಲಿ ವಿಜಯ್ ಅವರನ್ನು ಡಬಲ್ ರೋಲ್‌ನಲ್ಲಿಟ್ಟು ಹೇಳಿದ್ದರು. ʼಗಾಂಧಿʼಯಾಗಿ ದಳಪತಿ ಸಿನಿಮಾದಲ್ಲಿ ಮಿಂಚಿದ್ದರು.
ಭರ್ಜರಿ ಪ್ರಚಾರದೊಂದಿಗೆ ಬಂದ ʼಗೋಟ್ʼ ಆರಂಭಿಕ ಎರಡು ವಾರದಲ್ಲಿ ಅಷ್ಟೇ ಭರ್ಜರಿಯಾಗಿ ಬ್ಯುಸಿನೆಸ್ ಮಾಡಿತು. ಆ ಬಳಿಕ ಹೊಸ ಸಿನಿಮಾಗಳ ಅಲೆಯಲ್ಲಿ ಬದಿಗೆ ಸರಿಯಿತು. ಇದೀಗ ಥಿಯೇಟರ್ ನಂತರ ಓಟಿಟಿಗೆ ʼಗೂಟ್ʼ ಎಂಟ್ರಿ ಆಗಲು ಡೇಟ್ ಪಿಕ್ಸ್ ಆಗಿದೆ.
ಇದೇ ಅಕ್ಟೋಬರ್ 3ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ಯಾನ್ ಇಂಡಿಯಾ ಭಾಷೆಯಲ್ಲಿ ʼಗೋಟ್ʼ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ಮೂಲಗಳ ಪ್ರಕಾರ ನೆಟ್ ಫ್ಲಿಕ್ಸ್ ಸಿನಿಮಾದ ಡಿಜಿಟಲ್ ಹಕ್ಕನ್ನು 90 ಕೋಟಿಗೆ ಖರೀದಿಸಿದೆ ಎಂದು ಹೇಳಲಾಗಿದೆ.
ಪ್ರಶಾಂತ್, ಪ್ರಭುದೇವ, ಸ್ನೇಹಾ, ಕೋಕಿಲ ಮೋಹನ್, ಮೀನಾಕ್ಷಿ ಚೌಧರಿ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ತಮಿಳುನಾಡಿನ ರಾಜಕೀಯ ಅಖಾಡಕ್ಕೆ ಎಂಟ್ರಿ ಆಗಿರುವ ದಳಪತಿ ವಿಜಯ್ ʼದಳಪತಿ69ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಕೊನೆಯ ಸಿನಿಮಾವೆಂದು ಹೇಳಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದಲ್ಲಿ ಹೆಚ್. ವಿನೋದ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಮುಂದಿನ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.