ಮನೆ ಸುದ್ದಿ ಜಾಲ ಮಳವಳ್ಳಿ – ನೇನೆಕಟ್ಟೆ ರಸ್ತೆ ಕಾಮಗಾರಿ ಎರಡೇ ದಿನಕ್ಕೆ ಕಿತ್ತು ಬಂದ ಡಾಂಬಾರ್ 

ಮಳವಳ್ಳಿ – ನೇನೆಕಟ್ಟೆ ರಸ್ತೆ ಕಾಮಗಾರಿ ಎರಡೇ ದಿನಕ್ಕೆ ಕಿತ್ತು ಬಂದ ಡಾಂಬಾರ್ 

0

ಗುಂಡ್ಲುಪೇಟೆ:  ತಾಲೂಕಿನ ಮಳವಳ್ಳಿ- ನೇನೆಕಟ್ಟೆ ರಸ್ತೆ ಕಾಮಗಾರಿ 2 ಕೋಟಿ 56 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ತೀರ ಕಳಪೆಯಾಗಿದ್ದು ಡಾಂಬಾರು ಹಾಕಿದ ಎರಡೇ ದಿನಕ್ಕೆ ರಸ್ತೆ ಸಂಪೂರ್ಣ ಕಿತ್ತು ಬಂದಿದ್ದು ಸಾರ್ವಜನಿಕರು ಕಳಪೆ ರಸ್ತೆ ಕಾಮಗಾರಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಎರಡು ವರ್ಷಗಳಿಂದ ಕಾಮಗಾರಿ ಮಂದಗತಿಯಿಂದ ನಡೆಯುತಿತ್ರು ಮಣ್ಣು ಹಾಕಿ ಹೊದ ನಂತರ ಇತ್ತಕಡೆ ಗುತ್ತಿಗೆದಾರ ತಲೆಹಾಕಿಯೂ ಮಲಗಿಲ್ಲ ಧೂಳಿನಿಂದ ಜನ ಓಡಾಡಲು ಹಾಗುತಿಲ್ಲ ಎಂದು ಈ ಹಿಂದೆ ಮಳವಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

 ಹಾಕಿದ ತಕ್ಷಣ ಎಂತಹ ಡಾಂಬರೀಕರಣವಾದರೂ ಕಿತ್ತಾಕಬಹುದು ಅದು ಸೆಟ್ ಹಾಗುವವರೆಗೂ ಕಾಯಬೇಕು ವೈಯಕ್ತಿಕ ವಾಗಿ ಆರೋಪಿಸಲು ರಸ್ತೆ ಕಿತ್ತಿದ್ದಾರೆ ನಾನೆ ನಿಂತು ಡಾಂಬರೀಕರಣ ಮಾಡಿಸಿದ್ದು ರಸ್ತೆ ಯಾವುದೇ ಕಳಪೆಯಾಗಿಲ್ಲ.

  •  ಮೋಹನ್ ಎಇಇ ಪಿಎಂಜಿಎಸ್ ವೈ

ಗುತ್ತಿಗಾರ ಮಾತನಾಡಿ,  ರಸ್ತೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಡಾಂಬರೀಕರಣವಾದಾಗ ಅದು ಸೆಟ್ ಆಗಲು ಕೆಲವು ದಿನ ಬೇಕು ಅದರೆ ಅದನ್ನು ಎಡೆದುಹಾಕಿ ಕಳಪೆ ಎಂಬುದು ಸರಿಯಲ್ಲ ಎಂದರು.