ಮನೆ ಮನರಂಜನೆ ಕೇರಳದ ಕೊಟ್ಟಿಯೂರು ಶಿವ ದೇಗುಲದಲ್ಲಿ ದರ್ಶನ್‌ ದಂಪತಿ ವಿಶೇಷ ಪೂಜೆ

ಕೇರಳದ ಕೊಟ್ಟಿಯೂರು ಶಿವ ದೇಗುಲದಲ್ಲಿ ದರ್ಶನ್‌ ದಂಪತಿ ವಿಶೇಷ ಪೂಜೆ

0

ಕೇರಳ : ದಿ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿರೋ ನಟ ದರ್ಶನ್ ಕೊಂಚ ಫ್ರೀ ಮಾಡಿಕೊಂಡು ಕುಟುಂಬಸ್ಥರ ಜತೆ ಕೇರಳದ ಕೊಟ್ಟಿಯೂರು ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಕೊಟ್ಟಿಯೂರು ಶಿವನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಕೊಟ್ಟಿಯೂರು ಶಿವನ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಈ ದೇವಸ್ಥಾನ ವರ್ಷದಲ್ಲಿ ಕೇವಲ 27 ದಿನಗಳು ಮಾತ್ರ ತೆರೆದಿರುತ್ತದೆ. ಇಲ್ಲಿ ಶಿವ ತಪ್ಪಸ್ಸು ಮಾಡಿದ ಎಂಬ ನಂಬಿಕೆ ಇದೆ. ಹೀಗಾಗಿ ಅನೇಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಡಿ ಬಾಸ್ ಅಂಡ್ ಫ್ಯಾಮಿಲಿ ದೇಗುಲಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಮಾಡಿದ್ದಾರೆ.

ಇತ್ತೀಚೆಗೆ ನಟ ದರ್ಶನ್ ಹಲವು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ತನಗೆ ಎದುರಾಗಿರುವ ಸಂಕಷ್ಟ ನಿವಾರಣೆಗೆ ಪೂಜೆ ಮಾಡಿ ನೆಮ್ಮದಿ ಕಾಣುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ 7 ತಿಂಗಳು ಜೈಲು ಪಾಲಾಗಿದ್ದರು. ಈ ವೇಳೆ ಜಾಮೀನಿಗಾಗಿ ಪತ್ನಿ ವಿಜಯಲಕ್ಷ್ಮಿ ಅವರು ಚಾಮುಂಡೇಶ್ವರಿ, ಕಾಮಾಕ್ಯದೇವಿ, ಕೊಲ್ಲೂರು ಮೂಕಾಂಬಿಕಾ ಸೇರಿದಂತೆ ವಿವಿಧ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.

ಇನ್ನು ದರ್ಶನ್ ಜೈಲಿನಿಂದ ಬಿಡುಗಡೆ ಬಳಿಕ ಚಾಮುಂಡಿಬೆಟ್ಟ ಹಾಗೆಯೇ ಕೇರಳದ ದೇಗುಲವೊಂದರಲ್ಲಿ ಶತ್ರು ಸಂಹಾರ ಪೂಜೆ ಸಲ್ಲಿಸಿದ್ದರು. ಇದೀಗ ಶಿವನ ದೇಗುಲದಲ್ಲಿ ಕುಟುಂಬಸ್ಥರ ಜತೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.