ಮಂಡ್ಯ:ನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮಗನೇ ಎಂದು ಬಿಜೆಪಿ ನಾಯಕಿ ಸುಮಲತಾ ಅಂಬರೀಷ್ ಹೇಳಿದರು.
ಇಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ‘ನಟ ದರ್ಶನ್ ಪತ್ನಿ ನನ್ನ ಸಂಪರ್ಕದಲ್ಲಿ ದ್ದಾರೆ.ದರ್ಶನ್ ಆರೋಗ್ಯ ಸುಧಾರಿಸಬೇಕು.ದರ್ಶನ್‌ಗೆ ಸಾಕಷ್ಟು ಸವಾಲುಗಳಿವೆ.
ಎಲ್ಲಾ ಆರೋಪ ಮುಕ್ತವಾಗಿ ದರ್ಶನ್ ಹೊರ ಬರುವ ನಂಬಿಕೆ ಇದೆ ಎಂದರು.
ನಮ್ಮ ಸಂಬಂಧ ಹಾಗೇ ಇದೆ. ನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮಗನೇ, ಎಲ್ಲಾ ಒಳ್ಳೆದಾಗಬೇಕು ಎಂದು ಕೊಳ್ಳುವೆ. ನಿಜ ಹೊರಬಂದು ನಿರಪರಾದಿ ಆಗಬೇಕು ಅನ್ನೋದು ನನ್ನ ಆಸೆ ಎಂದು ತಿಳಿಸಿದರು.
ದರ್ಶನ್‌ಗೆ ಬೆನ್ನು ನೋವು ತುಂಬಾ ಇದೆ. ಆದರೆ ಸರ್ಜರಿಗೆ ಇಷ್ಟವಿಲ್ಲ ಎನ್ನುವ ಮಾತು ನನ್ನ ಗಮನಕ್ಕೆ ಬಂದಿದೆ.ಸರ್ಜರಿಯಾದರೆ ಆರೋಗ್ಯ ಸುಧಾರಣೆಗೆ ತುಂಬ ಸಮಯ ಬೇಕಾಗುತ್ತದೆ.ದರ್ಶನ್ ಇಲ್ಲದ ಕಾರಣ ಸಿನಿಮಾ ರಂಗ ಸಾಕಷ್ಟು ನಷ್ಟ ಅನುಭವಿಸುತ್ತಿದೆ ಎಂದರು.