ಮನೆ ಸುದ್ದಿ ಜಾಲ ದರ್ಶನ್‌ನಿಗೆ 82 ಲಕ್ಷ ಹಣದ ತಲೆಬಿಸಿ – ಕೃಷಿ, ಪ್ರಾಣಿ ಮಾರಾಟದಿಂದಲೇ ಹಣ ಸಿಕ್ಕಿದ್ದು..!

ದರ್ಶನ್‌ನಿಗೆ 82 ಲಕ್ಷ ಹಣದ ತಲೆಬಿಸಿ – ಕೃಷಿ, ಪ್ರಾಣಿ ಮಾರಾಟದಿಂದಲೇ ಹಣ ಸಿಕ್ಕಿದ್ದು..!

0

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ಗೆ ಒಂದರ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ರೇಣುಕಾಸ್ವಾಮಿ ಕೊಲೆ ನಡೆದಾಗ ದರ್ಶನ್‌ಗೆ ಆದಾಯ ತೆರಿಗೆ ಅಧಿಕಾರಿಗಳು ಕೂಡ ಶಾಕ್ ನೀಡಿದರು.

ಈ ವೇಳೆ ದರ್ಶನ್ ಮನೆಯಲ್ಲಿ ಪತ್ತೆಯಾಗಿದ್ದ 82 ಲಕ್ಷ ರೂಪಾಯಿ ಹಣವನ್ನ ಸೀಜ್ ಮಾಡಿದ್ರು. ಬಳಿಕ ಹಣದ ಮೂಲ ಕೆದಕಿದ ಅಧಿಕಾರಿಗಳು ಎಲ್ಲಿಂದ ಬಂತು ಎಂಬ ಬಗ್ಗೆ ಬಳ್ಳಾರಿ ಜೈಲಿಗೂ ತೆರಳಿ ಮಾಹಿತಿ ಕಲೆಹಾಕಿದರು.

ಇದೀಗ ಮತ್ತೆ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್‌ ಬಳಿ 82 ಲಕ್ಷ ಹಣದ ಮೂಲವನ್ನ ಐಟಿ ಕೆದಕಿದೆ. 82 ಲಕ್ಷ ರೂ. ಮೂಲ ಏನು? ಇಷ್ಟು ಹಣ ಯಾರು ಕೊಟ್ರು.. ಎಲ್ಲಿಂದ ಬಂತು..? ಎಂಬೆಲ್ಲಾ ಐಟಿ ಪ್ರಶ್ನೆ ಮಾಡಿದ್ದು, ದರ್ಶನ್‌ ಅದಕ್ಕೆ ಉತ್ತರ ಕೊಟ್ಟಿದ್ದಾರೆ.

ನಾನು ಕೃಷಿ ಮಾಡಿದ್ದೆ, ಪ್ರಾಣಿಗಳ ಮಾರಾಟವನ್ನೂ ಮಾಡಿದ್ದೆ. ಅಲ್ಲದೇ ನನ್ನ ಅಭಿಮಾನಿಗಳು ಹುಟ್ಟುಹಬ್ಬದ ದಿನ ನನಗೆ ದುಡ್ಡು ಕೊಟ್ಟಿದ್ರು ಎಂದಿದ್ದಾರೆ. ನಾನು ಮಾಡಿದ ಕೃಷಿಯಿಂದಲೇ 82 ಲಕ್ಷ ರೂ. ಹಣ ಸಿಕ್ಕಿದ್ದು ಅಂತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದರ್ಶನ್‌ ಹೇಳಿಕೆ ನೀಡಿದ್ದಾರೆ.