ಮನೆ ರಾಜ್ಯ ಆರ್ ಟಿ ಐ ಅರ್ಜಿದಾರರ ಮಾಹಿತಿ ಸಂಗ್ರಹ ಸ್ಥಗಿತ

ಆರ್ ಟಿ ಐ ಅರ್ಜಿದಾರರ ಮಾಹಿತಿ ಸಂಗ್ರಹ ಸ್ಥಗಿತ

0

ಬೆಂಗಳೂರು: ಆರ್ ಟಿಐ ಕಾರ್ಯಕರ್ತರ ಮಾಹಿತಿ ಪಡೆಯುವ ಕ್ರಮದಿಂದ ಸರಕಾರ ಹಿಂದೆ ಸರಿದಿದೆ.

3 ತಿಂಗಳ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ ಟಿಐ ಅಡಿ ಅರ್ಜಿ ಸಲ್ಲಿಸುವ ಅರ್ಜಿದಾರರ ಮಾಹಿತಿ ಪಡೆಯುವ ಕೆಲಸ ನಡೆಯುತ್ತಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸರಕಾರದಿಂದ ಯಾವುದೇ ಅನುಮತಿ ಪಡೆಯದೇ ಅಥವಾ ಗಮನಕ್ಕೆ ತರದೇ ಜಾರಿಗೊಳಿಸಿದ ಕಾರಣಕ್ಕೆ ಹಿಂಪಡೆದಿರುವುದಾಗಿ ಸಮಜಾಯಿಷಿ ನೀಡಿದೆ.

ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ-ತರಬೇತಿ ಮತ್ತು ಮಾಹಿತಿ ಹಕ್ಕು ಶಾಖೆ) ಅಧೀನ ಕಾರ್ಯದರ್ಶಿಗಳು ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ ಟಿ ಐ ನಟಿ ಅರ್ಜಿ ಸಲ್ಲಿಸುವ ಅರ್ಜಿದಾರರ ಮಾಹಿತಿ ಒದಗಿಸುವಂತೆ ಎಲ್ಲಾ ಇಲಾಖೆಗಳಿಗೂ ಸೂಚಿಸಿ ಸೆ.6 ಪತ್ರ ಬರೆದಿದ್ದರು.

ಆದರೆ ಈ ಪತ್ರಕ್ಕೆ ಸರಕಾರದಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಅಲ್ಲದೇ ಸರಕಾರದ ಗಮನಕ್ಕೆ ತರದೇ ಜಾರಿಯಾಗಿದ್ದ ಕಾರಣಕ್ಕೆ ಆ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಖೆ ಪ್ರಧಾನ ಕಾರ್ಯದರ್ಶಿ ಮುನೀಷ್ ಮೌದ್ಗೀಲ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಮಾಹಿತಿ ಹಕ್ಕು ಕಾಯಿದೆಯನ್ನು ಜನಪರವಾಗಿ, ಶಾಸನ ಬದ್ದವಾಗಿ ಜಾರಿಗೊಳಿಸಲು ಹಾಗೂ ಪಾಲಿಸಲು ಬದ್ಧವಾಗಿದೆ.  ಆರ್ ಟಿಐಯಡಿ ಅರ್ಜಿದಾರರ ಬಗ್ಗೆ ಬೇರೆ ಯಾರು ಮಾಹಿತಿ ಪಡೆಯಲು ಅವಕಾಶವಿರುವುದಿಲ್ಲ ಎಂದು ಅವರು ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.