ಮನೆ ಆರೋಗ್ಯ ತಾರೆಕಾಯಿ: ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣ

ತಾರೆಕಾಯಿ: ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣ

0

      ನೀರು ಮತ್ತು ಈಥೈಲ್ ಅಸಿಟೇಟ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವವನ್ನು, ಅಲಾಕ್ಸಾನ್ ರಾಸಾಯನಿಕವನ್ನು ಕೊಟ್ಟು ಮಧುಮೇಹ ಉಂಟುಮಾಡಿದ ಇಲಿಗಳಿಗೆ 28 ದಿನಗಳವರೆಗೆ ಸೇವಿಸಲು ನೀಡಲಾಯಿತು.ಅವಧಿಯ ನಂತರ ಇಲಿಗಳನ್ನು ಪರೀಕ್ಷಿಸಿದಾಗ,ಸತ್ವಕ್ಕೆ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯವಿದೆಯೆಂದು ವರದಿಯಾಗಿದೆ.

Join Our Whatsapp Group

      ಪ್ರಯೋಗಶಾಲೆಯಲ್ಲಿ ನಡೆಸಿದ ಪ್ರಯೋಗದ ಪ್ರಕಾರ ನೀರು ಉಪಯೋಗಿಸಿ ತಾರೆಕಾಯಿಯಿಂದ  ತಯಾರಿಸಿದ ಸತ್ವಕ್ಕೆ ಬಿಟ್ಟ ಜೀವಕೋಶಗಳಿಂದ ಇನ್ಸುಲಿನ್ ಉತ್ಪಾದಿಸುವಂತೆ  ಪ್ರಚೋದಿಸುವುದರ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣವಿದೆ ಯೆಂದು ವರದಿಯಾಗಿದೆ. ತಾರೆಕಾಯಿಯ ಸತ್ವ ಮಧುಮೇಹ ಚಿಕಿತ್ಸೆಗೆ  ಔಷಧಿಯಾಗುವ ಗುಣ ಲಕ್ಷಣವನ್ನು ಹೊಂದಿದೆಯೆಂಬ ಅಭಿಪ್ರಾಯ ವ್ಯಕ್ತವಾಗಿದೆ.

     ಹೆಕ್ಸೇನ್, ಈಥೈ ಅಸಿಟೇಟ್, ಮೆಥನಾಲ್ ಮತ್ತು ನೀರು ಉಪಯೋಗಿಸಿ, ತಾರೆಕಾಯಿಯಿಂದ ತಯಾರಿಸಿದ ಸತ್ವಗಳನ್ನು ಪ್ರಯೋಗ ಶಾಲೆಯಲ್ಲಿ ಪ್ರಯೋಗಕ್ಕೆ ಒಳಪಡಿಸಿದಾಗ, ಮೆಥುನಾಲ್ ದ್ರಾವಣ ಉಪಯೋಗಿಸುವ ತತ್ವಕ್ಕೆ ಅಲ್ಪ ಆಮೈಲೇಸ್, ಆಲ್ಫ ಗ್ಲೂಕೊಸಿಡೇನ್ ಮತ್ತು ಆೄಂಟಿ ಗ್ಲೈಕೇಶನ್ ಗಳ  ಕಾರ್ಯದ ಮೇಲೆ ಪ್ರತಿರೋಧನವನ್ನುಂಟು ಮಾಡುವುದರ ಮೂಲಕ ಗ್ಲೂಕೋಸ್ ಉತ್ಪತ್ತಿಯ ಮೇಲೆ ನಿಯಂತ್ರಣ ಸಾಧಿಸಿ ಮಧುಮೇಹವನ್ನು ಹತೋಟಿಗೆ ತರಬಹುದೆಂಬದು ತಿಳಿದು ಬಂದಿದೆ.

       ಮೆಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿ ಮರದ ಎಲೆಯಿಂದ ತಯಾರಿಸಿದ ಸತ್ವವನ್ನು ಇಲಿಗಳಿಗೆ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ಸತ್ವಕ್ಕೆ, ರಕ್ತದಲ್ಲಿ ಗ್ಲೂಕೋಸ್ ಅಂಶವನ್ನು ಕಡಿಮೆ ಮಾಡುವುದರ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು  ಎಂದು ತಿಳಿದುಬಂದಿದೆ.

 ಮರೆವಿನ ರೋಗವನ್ನು ವಾಸಿ ಮಾಡುವ ಗುಣ :

     ಮೆಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಮರುವಿನ ಕಾಯಿಲೆಯ ಉತ್ಪತ್ತಿಗೆ ಕಾರಣವಾಗುವ ಅಸಿಟೈಖೊಲಿನ್ಎಸ್ಟಿರೇಸ್ ಕಿಣ್ವದ ಕಾರ್ಯವನ್ನು ತಡೆಯುವುದರ ಮೂಲಕ, ರೋಗ ಉಂಟಾಗದಂತೆ ಮಾಡುವ ಗುಣ ತಾರೆಕಾಯಿಯ ಸತ್ವಕ್ಕೆ ಇದೆಯೆಂದು ದೃಢಪಟ್ಟಿದೆ.

 ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣ :

     ತಾರೆ ಕೈಯಿಂದ ತಯಾರಿಸಿದ ಸತ್ವವನ್ನು ಇಳಿಗಳಿಗೆ ಮತ್ತು ಭೂಮಿಯ ಹಂದಿಯ ಹಾಗೂ ಮೊಳದ ಏರ್ಪಡಿಸಿದ ಅಂಗದ ಮೇಲೆ ಪ್ರಯೋಗ ಶಾಲೆಯಲ್ಲಿ ನಡೆಸಿದ ಪ್ರಯೋಗದ ಆಧಾರದ ಮೇಲೆ ಸತ್ವಕ್ಕೆ ರಕ್ತದ ತಡವನ್ನು ಕಡಿಮೆ ಮಾಡುವ ಗುಣವಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

 ಹೃದಯವನ್ನು ಕಾಪಾಡುವ ಗುಣ :

       ಮೆಥುನಾಲ್ ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ತತ್ವಕ್ಕೆ ಔಷಧಿಗಳು ಉಂಟು ಮಾಡುವ ಹಾನಿಯಿಂದ ಹೃದಯವನ್ನು ಕಾಪಾಡುವ ಸಾಮರ್ಥ್ಯ ಇದೆಯೆಂದು ಇಲಿಗಳಿಗೆ ಸೇವಿಸಲು ಕೊಟ್ಟು ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.ತಾರೆಕಾಯಿಯ ಸೇವನೆಯಿಂದ ಔಷಧಿಗಳಿಂದ ಹೃದಯದ ಮೇಲಾಗುವ ಪ್ರತಿಕೂಲ ಪರಿಣಾಮಗಳಿಂದ ಹೃದಯವನ್ನು ಕಾಪಾಡಬಹುದು ಎಂಬ ಅಂಸ ದುಢಪಟ್ಟಿದೆ.

 ಕ್ರಿಮಿ ಕೀಟಗಳ ಮೇಲೆ ನಡೆಸಿದ ಪ್ರಯೋಗಗಳ ಫಲ :

 ಜಂತುಹುಳು ನಾಶಕ ಗುಣ :

       ಎಥನಾಲ್ ದ್ರಾವಣ ಮತ್ತು ನೀರು ಉಪಯೋಗಿಸಿ ತಾರೆಕಾಯಿಂದ ತಯಾರಿಸಿದ ಸತ್ವವನ್ನು ಪ್ರಯೋಗ ಶಾಲೆಯಲ್ಲಿ ಎರೆಹುಳುವಿನ ಮೇಲೆ ಪ್ರಯೋಗಿಸಿ ಪರೀಕ್ಷಿಸಿದಾಗ ಸತ್ವಕ್ಕೆ ಜಂತುಹುಳು ನಾಶಕ ಗುಣವಿದೆಯೆಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಪ್ಲಾಸ್ಮೊಡಿಯಂ ಕ್ರಿಮಿಯನ್ನು ನಾಶಪಡಿಸುವ ಗುಣ 

ಪ್ಲಸ್ಪೋಡಿಯಂ ಪ್ಯಾಲಿಸಿ ಫಾರಂ ಎಂಬುದು ಪ್ರೊಟೊಜೊವ ಗುಂಪಿಗೆ ಸೇರಿದ ಕ್ರೀಮಿ.ಮಲೇರಿಯಾ ರೋಗಕ್ಕೆ ಮೂಲ ಕಾರಣ.ಈ ಕ್ರಮಿ. ನೀರು ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ಪ್ಲಾಸ್ಪೋಡಿಯಂ ಕ್ರಿಮಿಯನ್ನು ನಾಶಪಡಿಸುವ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.