ಮನೆ ಅಪರಾಧ ಮಗಳ ಅನುಮಾನಸ್ಪದ ಸಾವು, ಮೊಮ್ಮಕ್ಕಳು ನಾಪತ್ತೆ: ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ ಪಿ ಕಚೇರಿ ಮುಂದೆ ಕುಟುಂಬಸ್ಥರ...

ಮಗಳ ಅನುಮಾನಸ್ಪದ ಸಾವು, ಮೊಮ್ಮಕ್ಕಳು ನಾಪತ್ತೆ: ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ ಪಿ ಕಚೇರಿ ಮುಂದೆ ಕುಟುಂಬಸ್ಥರ ಅಳಲು

0

ಚಿಕ್ಕಮಗಳೂರು: ಮಗಳ ಅನುಮಾನಾಸ್ಪದ ಸಾವು, ಮೊಮ್ಮಕ್ಕಳು ನಾಪತ್ತೆಯಾಗಿದ್ದು, ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ ಪಿ ಕಚೇರಿ ಮುಂದೆ ಕುಟುಂಬವೊಂದು ಕಣ್ಣೀರಿಟ್ಟು, ಗೋಳಾಡಿರುವ ಘಟನೆ ವರದಿಯಾಗಿದೆ.

Join Our Whatsapp Group

ರುಕ್ಮಿಣಿ (31) ಕಡೂರು ನಗರದಲ್ಲಿ ಅನುಮಾನಸ್ಪದ ಸಾವನ್ನಪ್ಪಿದ ಮಹಿಳೆ.

ನಿನ್ನೆ ಮಧ್ಯಾಹ್ನ ರುಕ್ಮಿಣಿ ಸಾವನ್ನಪ್ಪಿದ್ದು, ರುಕ್ಮಿಣಿ ಸಾವಿನ ಬಳಿಕ ಇಬ್ಬರು ಮೊಮ್ಮಕ್ಕಳು ಕಣ್ಮರೆಯಾಗಿದ್ದಾರೆ. ಮಂಡ್ಯ ಜಿಲ್ಲೆ ರಾಗಿ ಮುದ್ದನಹಳ್ಳಿ ಮೂಲದ ರುಕ್ಮಿಣಿಯನ್ನು ಕಳೆದ 14 ವರ್ಷಗಳ ಹಿಂದೆ ಕಡೂರಿನ ಕಣ್ಣನ್ ಗೆ ಮಾಡಿಕೊಡಲಾಗಿದೆ.

ಮದುವೆ ಆದಾಗಿನಿಂದಲೂ ಅತ್ತೆ, ಮಾವ, ಗಂಡನಿಂದ ರುಕ್ಮಿಣಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬಸ್ಥರು.

ರುಕ್ಮಿಣಿ ಕುಟುಂಬಸ್ಥರು ಗಂಡ ಕಣ್ಣನ್ ವಿರುದ್ಧ ಕೊಲೆ ಆರೋಪ ಮಾಡುತ್ತಿದ್ದು, ರುಕ್ಮಿಣಿ ಸಾವಿನ ನಂತರ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್  ಆಡಿಯೋ ಲಭ್ಯವಾಗಿದೆ.

ಪೊಲೀಸರು ದೂರು ದಾಖಲಿಸಿಕೊಳ್ಳದೇ ಆತ್ಮಹತ್ಯೆಯೆಂದು ಪ್ರಕರಣ ಮರೆಮಾಚಲು ಕಡೂರು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಮಗಳ ಸಾವಿನ ನ್ಯಾಯಕ್ಕಾಗಿ ಎಸ್ ಪಿ ಕಚೇರಿಯ ಕುಟುಂಬಸ್ಥರು ಅಂಗಲಾಚಿದ್ದಾರೆ. ಮೊಮ್ಮಕ್ಕಳನ್ನು ಹುಡುಕಿಕೊಡುವಂತೆ ಒತ್ತಾಯಿಸಿದ್ದಾರೆ.

ಸದ್ಯ ಚಿಕ್ಕಮಗಳೂರಿನ ಶವಗಾರಕ್ಕೆ ಶವವನ್ನು ತರಲಾಗಿದೆ.