Saval TV on YouTube
ದಾವಣಗೆರೆ(Davanagere): ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಇಲ್ಲಿನ ಪಿ.ಜೆ. ಬಡಾವಣೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ವಿನೋಬನಗರದ ಮಹಮ್ಮದ್ ಮುಸ್ತಫಾ ಅವರ ಮಗಳು ಚಾಂದ್ ಸುಲ್ತಾನ (28) ಕೊಲೆಯಾದವರು.
ತೆರಿಗೆ ಸಲಹೆಗಾರರ ಕಚೇರಿಯಲ್ಲಿ ಚಾಂದ್ ಸುಲ್ತಾನ ಕೆಲಸ ಮಾಡುತ್ತಿದ್ದರು. ಹರಿಹರದ ಅಯೂಬ್ ಎಂಬ ಯುವಕನ ಜತೆಗೆ ಮದುವೆ ನಿಶ್ಚಯವಾಗಿತ್ತು.
ಈ ಯುವತಿಯನ್ನು ಮದುವೆಯಾಗಬೆಕು ಎಂದು ಹೇಳಿದ್ದ ಇನ್ನೊಬ್ಬ ಯುವಕನ ಮೇಲೆ ಈಗ ಪೊಲಿಸರಿಗೆ ಅನುಮಾನ ಉಂಟಾಗಿದ್ದು, ತನಿಖೆ ಮುಂದುವರಿದಿದೆ.