ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ವಿಚ್ಛೇದಿತ 17ಜೋಡಿಗಳು ಒಂದಾದರು.
ಒಂದಾದ ಜೋಡಿಗಳಿಂದ ಪರಸ್ಪರ ಹಾರ ಹಾಕಿಸಿ, ಸಿಹಿ ತಿನಿಸಲಾಯಿತು. ನ್ಯಾಯಾಧೀಶರು, ನ್ಯಾಯವಾದಿಗಳು ಒಂದಾದ ಜೋಡಿಗಳಿಗೆ ಹೂವಿನ ಸಸಿ ನೀಡಿ ಶುಭ ಹಾರೈಸಿದರು.
ದಾವಣಗೆರೆ ನ್ಯಾಯಾಲಯದಲ್ಲಿ 15, ಹರಿಹರ ನ್ಯಾಯಾಲಯದಲ್ಲಿ ಎರಡು ವಿಚ್ಛೇದಿತ ಜೋಡಿಗಳನ್ನು ಮತ್ತೆ ಒಂದು ಮಾಡಲಾಯಿತು.
ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್ ಸೇರಿದಂತೆ ಇನ್ನಿತರ ಪ್ರಮುಖರು ಈ ಸಂದರ್ಭದಲ್ಲಿದ್ದರು.
Saval TV on YouTube