ದಾವಣಗೆರೆ: ಅಡುಗೆ ಸಿಲಿಂಡರ್ ಸ್ಫೋಟಗೊಂಡು ಮನೆಯ ಆರು ಸದಸ್ಯರು ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ನಡೆದಿದೆ.
ಮುನೀರ್ ಸಾಬ್ (65), ಸುಲ್ತಾನ್ (18), ಅಲ್ತಾಫ್ (15), ತಮನ್ನಾ (14), ಶಬೀನಾ ಬಾನು (34), ಫರೀದಾ ಬಾನು ( 58) ಗಾಯಗೊಂಡವರು. ಇವರಲ್ಲಿ ಮನೆಯ ಹಿರಿಯರಾದ ಮುನೀರ್ ಸಾಬ್ ಸ್ಥಿತಿ ಗಂಭೀರವಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿಹೋಗಿದೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿತ್ಯದಂತೆ ಇಂದು ಬೆಳಗ್ಗೆ ಎದ್ದು ಅಡುಗೆ ಮಾಡಲು ಗ್ಯಾಸ್ ಹಚ್ಚುವಾಗ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಗಿದ್ದು, ಮೇಲ್ಭಾವಣಿಗೆ ಹಾಕಿದ್ದ ಶೀಟ್ ಗಳು ಹಾರಿಹೋಗಿವೆ. ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Saval TV on YouTube