ದಾವಣಗೆರೆ : ನಗರದ ಎಂಸಿಸಿ ಬ್ಲಾಕ್‌ನ 26 ವರ್ಷದ ಹರಿಯಾಣ ಮೂಲದ ಯುವತಿ ಸೈಬರ್ ಕ್ರಿಮಿನಲ್‌ಗಳ ಮೋಸಕ್ಕೆ ಬಿದ್ದು, ಸುಮಾರು ₹13 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಟೆಲಿಗ್ರಾಂ ಮೂಲಕ ಯುವತಿಗೆ ಅನಾಮಿಕ ಮಹಿಳೆಯೊಬ್ಬಳ ಪರಿಚಯವಾಗಿದೆ. ಕಮಿಷನ್ ಹಾಗೂ ಉದ್ಯೋಗದ ಆಶ್ವಾಸನೆ ನೀಡಿ, ಆಕೆಯಿಂದ ಹಂತ ಹಂತವಾಗಿ ಹಣ ಹಾಕುವಂತೆ ಪ್ರೇರಣೆ ಮಾಡಲಾಗಿದೆ. ಮಹಿಳೆಯ ಮಾತನ್ನು ನಂಬಿದ ಯುವತಿ ಹಂತಹಂತವಾಗಿ 13 ಲಕ್ಷ ರೂ. ಹಣ ವರ್ಗಾಯಿಸಿದ್ದಳು. ಹಣ ಹಿಂತೆಗೆದುಕೊಳ್ಳಲು ಯತ್ನಿಸಿದಾಗ ವಂಚನೆಗೆ ಒಳಗಾಗಿರುವುದು ಸ್ಪಷ್ಟವಾಗಿದೆ. ಈ ಸಂಬಂಧ ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ರೀತಿಯ ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉದ್ಯೋಗ, ಇನ್ವೆಸ್ಟ್ಮೆಂಟ್ ಅಥವಾ ಕಮಿಷನ್ ಆಫರ್‌ಗಳ ಹೆಸರಿನಲ್ಲಿ ಅನೇಕರು ಬಲಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಬಂದ ಯಾವುದೇ ಆಫರ್‌ಗಳ ಬಗ್ಗೆ ಸಂಪೂರ್ಣ ಪರಿಶೀಲನೆ ಮಾಡದೇ ಹಣ ವರ್ಗಾಯಿಸಬಾರದು.














