ಮನೆ ರಾಜ್ಯ ದಾವೋಸ್ ಆರ್ಥಿಕ ಶೃಂಗಸಭೆ: ಕರ್ನಾಟಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತಿದೆ; ಸಚಿವ ಅಶ್ವತ್ಥ ನಾರಾಯಣ

ದಾವೋಸ್ ಆರ್ಥಿಕ ಶೃಂಗಸಭೆ: ಕರ್ನಾಟಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತಿದೆ; ಸಚಿವ ಅಶ್ವತ್ಥ ನಾರಾಯಣ

0

ಬೆಂಗಳೂರು (Bengaluru)- ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಕರ್ನಾಟಕ ವಿಶ್ವದಾದ್ಯಂತ ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಡಿ ಕರ್ನಾಟಕ ವಿಶ್ವದಾದ್ಯಂತ ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತಿದೆ ಎಂದು ಐಟಿ ಬಿಟಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಮುಂದಿನ ತಿಂಗಳು ಬೆಂಗಳೂರಿನ ನಾಗಸಂದ್ರದಲ್ಲಿ ಐಕಿಯ ಇಂಡಿಯಾ ತನ್ನ ಸ್ಟೋರ್ ನ್ನು ತೆರೆಯಲಿದೆ. ಇದರಿಂದ ಉದ್ಯೋಗ ಮತ್ತು ಆರ್ಥಿಕ ಪ್ರಗತಿಗೆ ಅವಕಾಶವಾಗಲಿದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಚೌಧರಿ ಜೊತೆಗಿನ ಸಭೆ ಫಲಪ್ರದವಾಗಿದೆ. ಕೋವಿಡ್ ನಂತರದ ಪರಿಸ್ಥಿತಿ, ಡಿಜಿಟಲ್ ವ್ಯವಹಾರದಿಂದ ಎದುರಾಗಿರುವ  ಸವಾಲುಗಳು ಮತ್ತು ರಾಜ್ಯದಲ್ಲಿ ವ್ಯವಹಾರ ವಿಸ್ತರಣೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.