ಮನೆ ದೇವರ ನಾಮ ಯಂತ್ರ ದೊರಕಿತು ಎನಗೆ

ಯಂತ್ರ ದೊರಕಿತು ಎನಗೆ

0

ಯಂತ್ರ ದೊರಕಿತು ಎನಗೆ |

ಯಂತ್ರ ದೊರಕಿತು ||ಪ||

ಯಂತ್ರವಾಹಕ ನಾರಾಯಣನ |

ಅಂತರಂಗದಿ ನೀಡುವಂತ||ಅ.ಪ||

ಆಸೆಯಿಂದ ಮುಳುಗೋದಲ್ಲ |

ಕ್ಲೇಶ ಬಿಟ್ಟು ತಿರುಗೋದಲ್ಲ |

ವಾಸುದೇವ ಕೃಷ್ಣನೆಂಬ|

ಶಾಶ್ವತವಾದ ದಿವ್ಯ ನಾಮ ||೧||

ಹಾಸಬಹುದು ಹೊದೆಯಬಹುದು |

ಸೂಸಿ ಒಡಲು ತುಂಬಬಹುದು ||

ದಾಸರನ್ನು ಬಿಡದೆ ಪೊರೇವ |

ಶ್ರೀಶನೆಂಬ ದಿವ್ಯನಾಮ ||೨||

ಒಂದು ಬಾರಿ ಸ್ಮರಿಸಿದರೆ|

ಒಂದು ಕೋಟಿ ಯಜ್ಞ ಫಲವು ||

ಇಂದಿರೇಶ ಪುರಂದರವಿಠಲನೆಂಬ ದಿವ್ಯನಾಮ ||೩||