ಮನೆ ರಾಷ್ಟ್ರೀಯ ಗಾಯಕ ಕೃಷ್ಣಕುಮಾರ್‌ ಕುನ್ನತ್‌ ಸಾವಿಗೆ ಹೃದಯಸ್ತಂಭನ ಕಾರಣ: ಪ್ರಾಥಮಿಕ ವರದಿ

ಗಾಯಕ ಕೃಷ್ಣಕುಮಾರ್‌ ಕುನ್ನತ್‌ ಸಾವಿಗೆ ಹೃದಯಸ್ತಂಭನ ಕಾರಣ: ಪ್ರಾಥಮಿಕ ವರದಿ

0

ಕೋಲ್ಕತ್ತಾ (Kolkata)- ʻಕೆಕೆʼ ಎಂದೇ ಪ್ರಸಿದ್ಧರಾದ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್‌ ಕುನ್ನತ್‌  ಅವರ ಸಾವಿಗೆ ಹೃದಯಸ್ತಂಭನವೇ ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ಮಯೋಕಾರ್ಡಿಯಲ್‌ ಇನ್‌ಫ್ರಾಕ್ಷನ್‌ ಕಾರಣದಿಂದ ಗಾಯಕ ಕೆಕೆ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯು ತಿಳಿಸಿದೆ. ಸಾವಿನ ಹಿಂದೆ ಯಾವುದೇ ಅಸಹಜ ಕಾರಣಗಳಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲೂ ಕೆಕೆ ಅವರಿಗೆ ಸುದೀರ್ಘವಾದ ಹೃದಯ ಸಮಸ್ಯೆಗಳು ಕಂಡುಬಂದಿವೆ. ಅಂತಿಮ ವರದಿ 72 ಗಂಟೆಗಳ ಬಳಿಕ ಸಿಗಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಕೋಲ್ಕತ್ತಾದ ಎರಡು ಕಾಲೇಜುಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಕೃಷ್ಣಕುಮಾರ್‌ ಕುನ್ನತ್‌ ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಕೆಕೆ ಅವರದ್ದು ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.