ಮನೆ ಸುದ್ದಿ ಜಾಲ ಮಧ್ಯ ಮೊರಾಕ್ಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,000 ಗಡಿ ದಾಟಿದ್ದು 2,059 ಮಂದಿ...

ಮಧ್ಯ ಮೊರಾಕ್ಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,000 ಗಡಿ ದಾಟಿದ್ದು 2,059 ಮಂದಿ ಗಾಯಗೊಂಡಿದ್ದಾರೆ

0

ರಬಾತ್ : ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,000 ಗಡಿ ದಾಟಿದ್ದು 2,059 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಶುಕ್ರವಾರದಂದು 6.8 ತೀವ್ರತೆಯ ಪ್ರಬಲ ಭೂಕಂಪನ ಮಧ್ಯ ಮೊರಾಕೋದಲ್ಲಿ ಮರ್ರಾಕೇಶನ್ ನೈರುತ್ಯಕ್ಕೆ ನೇತೃತ್ವಕ್ಕೆ 72 ಕಿಲೋಮೀಟರ್ ದೂರದಲ್ಲಿ ಸಂಭವಿಸಿದ್ದು, ಘಟನೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಮತ್ತು 2,059 ಮಂದಿ ಗಾಯಗೊಂಡರು. ಇದು ಆರು ದಶಕದಲ್ಲೇ ಸಂಭವಿಸಿದ ಅತಿ ದೊಡ್ಡ ದುರಂತ ಎನ್ನಲಾಗಿದೆ.

ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ ತ್ವರಿತ ಗತಿಯಿಂದ ನಡೆಯುತ್ತಿದ್ದು, ರಕ್ಷಣಾ ಕಾರ್ಯಕ್ಕೆ ನೆರೆಯ ದೇಶವಾದ ಅಲ್ಜೀರಿಯಾ ಸೇರಿದಂತೆ ಹೆಚ್ಚಿನ ದೇಶಗಳು ಸಹಾಯಕ್ಕೆ ಮುಂದಾಗಿವೆ ಎಂದು ಹೇಳಲಾಗಿದೆ.

ಭೂಕಂಪದ ಕೇಂದ್ರ ಬಿಂದುವಿನ ಸಮೀಪವಿರುವ ಪರ್ವತ ಗ್ರಾಮವಾದ ತಫೆಘಗ್ಟೆ ಇದ್ದ ಎಲ್ಲಾ ಕಟ್ಟಡಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಘಟನೆ ಮಧ್ಯ ರಾತ್ರಿ ಸಂಭವಿಸಿದ ಕಾರಣ ಎಲ್ಲರೂ ಗಾಢ ನಿದ್ರೆಗೆ ಜಾರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದ ಅಧಿಕಾರಿಗಳು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದರು, ಆದರೆ ಹಾನಿಯನ್ನು ಸರಿಪಡಿಸಲು ವರ್ಷಗಳು ತೆಗೆದುಕೊಳ್ಳಬಹುದು ಎಂದು ರೆಡ್ ಕ್ರಾಸ್ ಎಚ್ಚರಿಸಿದೆ.

ಕರಾವಳಿ ನಗರಗಳಾದ ರಬತ್ ಕಾಸಂಬ್ಲಾಂಕಾ ಎಸ್ಸೌಯಿರಾ ದಲ್ಲಿಯೂ ಸಹ ಪ್ರಬಲವಾದ ಭೂಕಂಪನ ಸಂಭವಿಸಿತ್ತು. ಭೂಕಂಪದಿಂದ ವ್ಯಾಪಕ ಹಾನಿ ಉಂಟಾಗಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ತಂಡ ನಿವಾಸಿಗಳನ್ನು ಹಾಗೂ ಪ್ರವಾಸಿಗರನ್ನು ಕೂಡಲೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯವನ್ನು ಮಾಡಿದರು ಎನ್ನಲಾಗಿದೆ.

ಹಿಂದಿನ ಲೇಖನಏಷ್ಯಾಕಪ್ ನ ಪಂದ್ಯದಲ್ಲಿಇಂದು ಭಾರತ-ಪಾಕಿಸ್ತಾನ ಮುಖಾಮುಖಿ
ಮುಂದಿನ ಲೇಖನಶತಮಾನಗಳ ಬಳಿಕ ಊರಿಗೆ ಬಂದ ಕೆಎಸ್​ಆರ್​ಟಿಸಿ ಬಸ್​