ಮನೆ ರಾಜ್ಯ ಜ.22 ರಂದು ರಜೆ ಘೋಷಣೆ ಮಾಡಿ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಜ.22 ರಂದು ರಜೆ ಘೋಷಣೆ ಮಾಡಿ: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

0

ಶಿವಮೊಗ್ಗ: ಜನವರಿ 22 ರಂದು ರಜೆ ಘೋಷಣೆ ಮಾಡಿ ಎಂದು ಸರ್ಕಾರಕ್ಕೆ ಪ್ರಾರ್ಥನೆ ಮಾಡುತ್ತೇನೆ. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ರಾಜ್ಯದ ಜನರು ಮನೆಯಿಂದಲೇ ಕೂತು ನೋಡಲಿ. ಹಾಗಾಗಿ 22 ರಂದು ರಜೆ ಘೋಷಣೆ ಮಾಡಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೈದು ದಿನ ನೀವು ಟೀಕೆ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಅನಂತ್ ಕುಮಾರ್ ಹೆಗಡೆಯವರಿಗೆ ಪ್ರಾರ್ಥನೆ ಮಾಡುತ್ತೇನೆ. ಅನಂತ್ ಕುಮಾರ್ ಹೆಗಡೆ ಒಬ್ಬ ದೇಶ ಭಕ್ತ, ದೈವ ಭಕ್ತ. ಆದರೆ ನಾಲ್ಕೈದು ದಿನ ಟೀಕೆ ಮಾಡುವುದು ಬೇಡ ಎಂದು  ಅವರಿಗೂ ಪ್ರಾರ್ಥನೆ ಮಾಡುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ ರಾಮ ಮಂದಿರ ಹೋಗುವ ವಿಚಾರಕ್ಕೆ ಮಾತನಾಡಿ, ಸಿದ್ದರಾಮಯ್ಯ ಈಗ ಯೂ ಟರ್ನ್ ಹೊಡೆಯುತ್ತಿದ್ದಾರೆ. ಹೋಗುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.

ಹಿಂದಿನ ಲೇಖನಬಿಲ್ಕಿಸ್ ಬಾನೊ ಪ್ರಕರಣ: ಜ.21 ರೊಳಗೆ 11 ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕೆಂದು ಸುಪ್ರೀಂ ಕೋರ್ಟ್ ಆದೇಶ
ಮುಂದಿನ ಲೇಖನರಾಮಲಲ್ಲಾನ ಮೂರ್ತಿಯ ಮೊದಲ ಚಿತ್ರ ಬಹಿರಂಗ: ಜ.22ಕ್ಕೆ ಪ್ರಾಣ ಪ್ರತಿಷ್ಠಾಪನೆ