ಮನೆ ಸುದ್ದಿ ಜಾಲ ದೀಪಾವಳಿ, ದಿವಾಲಿಯಾಗದಿರಲಿ, ಕನ್ನಡ ಪದಬಳಕೆ ಸರಿಯಿರಲಿ: ವಿಕ್ರಂ ಅಯ್ಯಂಗಾರ್

ದೀಪಾವಳಿ, ದಿವಾಲಿಯಾಗದಿರಲಿ, ಕನ್ನಡ ಪದಬಳಕೆ ಸರಿಯಿರಲಿ: ವಿಕ್ರಂ ಅಯ್ಯಂಗಾರ್

0

ಮೈಸೂರು(Mysuru): ದೀಪಾವಳಿ, ದಿವಾಲಿಯಾಗದಿರಲಿ ಕನ್ನಡ ಪದಬಳಕೆ ಸರಿಯಾಗಿರಲಿ ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮನವಿ ಮಾಡಿದರು.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ  ದೀಪಾವಳಿ  ಅಂಗವಾಗಿ ಡಿ ದೇವರಾಜ ಅರಸು ರಸ್ತೆ,  ವಿನೋಬಾ ರಸ್ತೆ, ಶಿವರಾಂಪೇಟೆ ಸುತ್ತಮುತ್ತಲ ಅಂಗಡಿ  ಮುಂಗಟ್ಟುಗಳಿಗೆ ತೆರಳಿ ಗುಲಾಬಿ ಹೂವನ್ನು ನೀಡಿ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ  ಬಳಸುವಂತೆ ಅಭಿಯಾನ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು, ಇತ್ತೀಚೆಗೆ ಸ್ಥಳೀಯ  ಹಬ್ಬಗಳ ಹೆಸರನ್ನು ಅಪಭ್ರಂಶಗೊಳಿಸುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ದೀಪಾವಳಿಯನ್ನು ದಿವಾಲಿ ಎಂದು ಶುಭ ಕೋರುವುದು ಹಾಗೆಯೇ ದಸರಾವನ್ನು ದುಸ್ಸೆರಾ ಎಂದು  ತಪ್ಪಾಗಿ ಶುಭಕೋರುತ್ತಿರುವುದು ಖಂಡನೀಯ ಎಂದರು.

ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ದೀಪಾವಳಿಯನ್ನು ದಿವಾಲಿಯೆಂದು ಬರೆದು ಶುಭಕೋರುತ್ತಿರುವದನ್ನು  ಖಂಡಿಸಿ ಅವರಿಗೆ ತಿಳಿಹೇಳಿ ದಯಮಾಡಿ ಕನ್ನಡವನ್ನು ಸರಿಯಾಗಿ ಪ್ರಯೋಗಿಸಿ ಗೌರವಿಸಿ ಎಂದು  ಮನವಿ ಮಾಡಿಕೊಂಡರು.

ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಗ್ರಾಹಕರಿಗೆ ಶುಭಾಶಯ ತಿಳಿಸಲು  ಹಲವಾರು ಉದ್ದಿಮೆಗಳು ಕನ್ನಡಿಗರಿಗೆ ಉತ್ತರ ಭಾರತದ ಭಾಷೆಯಲ್ಲೇ ‘ದಿವಾಲಿ ‘ಹಬ್ಬದ ಶುಭಾಶಯಗಳನ್ನು ತಿಳಿಸುತ್ತವೆ. ಬ್ಯಾಂಕ್‍ಗಳು ದಿವಾಲಿ ಹಬ್ಬದ ಶುಭಾಶಯಗಳು ಎಂದು ಗ್ರಾಹಕರಿಗೆ ತಿಳಿಸುತ್ತಿರುವುದು ನೋಡಿದರೆ, ಕನ್ನಡದ ಬಗ್ಗೆ ಇವರಿಗೆಷ್ಟು ಅಭಿಮಾನವಿದೆ ಮಾಹಿತಿಯಿದೆ ಎಂಬುದರ ಬಗ್ಗೆ ಸಂದೇಹ ವ್ಯಕ್ತವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ , ನಜರ್ ಬಾದ್ ನಟರಾಜ್ , ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಸುರೇಶ್ ಗೋಲ್ಡ್, ರಾಕೇಶ್ ಕುಂಚಿಟಿಗ, ಲಯನ್ ಶಂಕರ್ ಗುರು, ಎಸ್ ಎನ್ ರಾಜೇಶ್, ವಿನಯ್ ಕಣಗಾಲ್ , ಮಂಜುನಾಥ್ , ಸುಚೇಂದ್ರ , ಚಕ್ರಪಾಣಿ ಹಾಗೂ ಇನ್ನಿತರರು ಹಾಜರಿದ್ದರು.

ಹಿಂದಿನ ಲೇಖನಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬೃಹತ್ ಗಾತ್ರದ ಮರ: ತೆರವಿಗೆ ಸಾರ್ವಜನಿಕರ ಒತ್ತಾಯ
ಮುಂದಿನ ಲೇಖನದೀಪಾವಳಿ: ಪರಿಸರ ಸ್ನೇಹಿ ಪಟಾಕಿಗಳಿಗಷ್ಟೇ ಅವಕಾಶ