ಯಾರು ಬೇಕಾದರೂ ಆಯುರ್ವೇದ ಔಷಧ ತಯಾರಿ ಲೈಸನ್ಸ್ ಪಡೆಯಬೇಕಾದರೆ ಆಯುಷ್ ಡ್ರಗ್ ಲೈಸನ್ಸಿಂಗ್ ಅಥಾರಿಟಿ ಧನ್ವಂತರಿ ರಸ್ತೆ ಬೆಂಗಳೂರು ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ಪರವಾನಗಿಗೆ ಬೇಕಾಗುವ ದಾಖಲೆ ಸುಲಭವಾಗಿ ಹೊಂದಾಣಿಕೆ ಮಾಡಿ ಸುಲಭವಾಗಿ ಲೈಸೆನ್ಸ್ ಪಡೆಯಬಹುದು. ಸ್ವಲ್ಪ ಸಮಯದ ಹಿಂದೆ ಕಾರವಾರದಲ್ಲಿ ಒಂದೇ ಕಾಂಪೌಂಡ್ ನಲ್ಲಿ ಮೂರು ಔಷಧ ಕಂಪನಿಗಳು ಇವೆ ಎಂಬುದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಅಕ್ಷರಶಃ ಸತ್ಯ ಬರೆದಿದ್ದ ಮಾಧ್ಯಮಕ್ಕೆ ಲಾಯರ್ ನೋಟೀಸ್ ನೀಡಿ ಕೋರ್ಟ್ ಕಚೇರಿ ತಿರುಗಿಸುವ ಪ್ರಯತ್ನ ಕೂಡ ನಡೆಯಿತು.
ಖಾಸಗಿ ಪತಿ, ಸರ್ಕಾರಿ ಪತ್ನಿ ಒಡೆತನದ ಕಂಪನಿ ಪದೇ ಪದೇ ಆಯುಚ್ ಇಲಾಖೆ ಇ ಟೆಂಡರ್ ನಲ್ಲಿ ವಾರ್ಷಿಕ ಔಷಧ ಸರಬರಾಜು ಪಡೆಯುವುದು ಸರ್ವೇ ಸಾಮಾನ್ಯವಾಗಿತ್ತು. ಅನಿವಾರ್ಯತೆ ಹೇಗಿತ್ತು ಅಂದರೆ, ಯಾವುದೇ ಇವರ ಅಧೀನ ಆಯುಷ್ ಅಧಿಕಾರಿಗಳು ಸೊಲ್ಲೆತ್ತುವಂತರಿಲಿಲ್ಲ. ಗ್ರಾಮೀಣ ಭಾಗದ ಜಿಎಡಿಗಳು ಇವರು ಕೊಟ್ಟ ಪ್ರಸಾದ ಗುಣಮಟ್ಟದ್ದು ಎಂದು ಲಿಖಿತ ರೂಪದಲ್ಲಿ ಬರೆದು ಕಾರವಾರದಿಂದ ತರುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.
ಒಟ್ಟಾರೆ ಕುರ್ಚಿಯನ್ನು ಬಿಡಲೊಲ್ಲ, ಈ ಟೆಂಡರ್ ಬಿಡಲೊಲ್ಲೆ ಎನ್ನುವುದು ಕಾರವಾರದಲ್ಲೊಂದು ಆಟ. ಸಹಜವಾಗಿಯೇ ಆಯುರ್ವೇದ ವಟಿ, ಚೂರ್ಣ ಆರು ತಿಂಗಳವರೆಗೆ ಗುಣಮಟ್ಟದಲ್ಲಿರುತ್ತದೆ. ಆದರೆ ಇವರು ನೀಡುವ ಲೈಸೆನ್ಸ್ ಔದರ್ಯದಿಂದ ಕೂಡಿದ್ದು, ಮೂರು ವರ್ಷಗಳವರೆಗೆ ಈ ಔಷಧಿ ಗುಣಮಟ್ಟದಲ್ಲಿರುತ್ತದೆ ಎಂದು ಇಲಾಖೆ ಪ್ರಮಾಣಪತ್ರ ನೀಡುತ್ತದೆ.
ಇವರು ಜಿಎಂಪಿ ಯಾವ ರೀತಿ ಪಡೆಯುತ್ತಾರೆ ಎನ್ನುವುದು ಇನ್ನೂ ನಿಗೂಢ. ಮಂಗಳಂ ಎನ್ನುವ ಹೆಸರಿನ ಕಂಪನಿ ಕೂಡ ಟೆಂಡರ್ ನಲ್ಲಿ ಭಾಗವಹಿಸುವ ಸುದ್ದಿ ಇದ್ದು. ಇವೆಲ್ಲ ಉತ್ತರ ಭಾರತದ ಔಷಧಗಳ ಲೇಬಲಿಂಗ್ ಹಾಗೂ ಮಾರ್ಕೆಟಿಂಗ್ ಘಟಕವೇ ಎನ್ನುವುದು ಪ್ರಾಮಾಣಿಕ ತನಿಖೆ ಆಗಬೇಕಿದೆ. ಇಷ್ಟಕ್ಕೂ ಜೇನುತುಪ್ಪ ಎಕ್ಸ್ ಪೋರ್ಟ್ ಎನ್ನುವ ಬೊಗಳೆ ಕೂಡ ಜೋರಾಗಿ ಸದ್ದು ಮಾಡುತ್ತಿದೆ. ಈ ಎಲ್ಲಾ ಗಿಡಮೂಲಿಕೆ, ಜೇನುತುಪ್ಪಾ ಇವರಿಗೆ ಮಾತ್ರ ಇಷ್ಟು ಪ್ರಮಾಣದಲ್ಲಿ ಸಿಗುತ್ತದೆ ಎಂದು ಕೇಳಿದರೆ ಅವರನ್ನು ಕೇಳಿ, ಇವರನ್ನು ಕೇಳಿ ಎನ್ನುವ ಹಾರಿಕೆ ಉತ್ತರ ಸಿಗುತ್ತದೆ.
ಸ್ವಲ್ಪ ತಿಂಗಳ ಕೆಳಗೆ ಪಾಚಿಗಟ್ಟಿದ ಾಯುರ್ವೇದ ಔಷಧಿ ಎನ್ನುವ ಮಾಹಿತಿಯನ್ನು ಉತ್ತರ ಕನ್ನಡ ಜನಪ್ರಿಯ ದೈನಿಕವೊಂದು ಪ್ರಕಟ ಮಾಡಿತ್ತು. ರೋಗಿ ದೂರಿನ ಮೇರೆಗೆ ಹಗರಣ ಬಯಲು ಮಾಡಿದ ಮಾಧ್ಯಮಕ್ಕೆ ಜಿಲ್ಲಾ ಆಯುಷ್ ಇಲಾಖೆ ಗುರಿ ಮಾಡಿದ್ದು, ತನ್ನ ಅಧೀನ ಆಯುಷ್ ಅಧಿಕಾರಿಗಳನ್ನು ಇಷ್ಟಕ್ಕೂ ಔಷಧ ಸಂಗ್ರಹ ಮಾಡಲು ಜಾಗವೇ ಇಲ್ಲದ ಜಿಎಡಿಗಳಲ್ಲಿ ಇಲಾಖೆ ಬಲವಂತವಾಗಿ ತುಂಬಿಸಿದ ಔಷಧ ಯಾರಿಗೆ ಉಪಕಾರಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಹವಾಮಾನ ಕೂಡ ಔಷಧ ಗುಣಮಟ್ಟವನ್ನು ಬದಲು ಮಾಡಬಹುದು ಎನ್ನುವುದು ಈ ಕಳಪೆ ಔಷಧದ ಪ್ರಕರಣದ ಕಟು ಸತ್ಯವನ್ನು ಹೊರ ಹಾಕಿದೆ.
ಆದರೆ ಅದಕ್ಕೆ ಇಲಾಖೆ ಅಧೀನ ಅಧಿಕಾರಿಗಳು, ಪ್ರತ್ಯುತ್ತರವಾಗಿ ನಿಲ್ಲುವ ಅಧಿಕಾರಿಗಳ ಮೇಲೆ ನಿರ್ಲಕ್ಷ್ಯತೆ ಗೂಬೆ ಕೂರಿಸಿ ಅಂಥವರಿಗೆ ಸಣ್ಣ ಸಣ್ಣ ವಿಷಯಕ್ಕೂ ವಿವರಣೆ ಕೇಳಿದ್ದು, ಅವರಿಗೆ ರಜೆ ಕೊಡುವ ವಿಚಾರದಲ್ಲಿ ಆಟ ಆಡುವುದು ತನ್ನ ಆಡಳಿತ ಅಧಿಕಾರಿಗಳ ಮುಖಾಂತರ ಕಾಟ ಕೊಡುವುದು ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಕಾಟ ಕೊಡುವುದು ಹೀಗೆಲ್ಲಾ ಚಿತ್ರಹಿಂಸೆ ನೀಡಿ ಮನೋವಿಕೃತಿ ಮೆರೆದಿದೆ.
ಇಷ್ಟಲ್ಲದೇ ರಾಷ್ಟ್ರೀಯ ಆಯುಷ್ ಮಿಷನ್ ಅಡಿಯಲ್ಲಿ ಕೂಡ ಅಸ್ತಿತ್ವದಲ್ಲಿ ಇರದ ಕಂಪನಿಯು ಔಷಧ ಸರಬರಾಜು ಮಾಡಿ, ಸಾರ್ವಜನಿಕರ ಹಣ ಪೋಲು ಮಾಡುತ್ತಿದೆ. ಬಹುಕಾಲ ಬೇರೂರಿರುವ ಜಿಲ್ಲಾ ಆಯುಷ್ ಅಧಿಕಾರಿಗಳು, ತನಗೆ ಪಟ್ಟ ಬೇಡ ಎಂದು ಬರೆದುಕೊಟ್ಟರೂ ಅವರ ಬದಲಿಗೆ ಯೋಗ್ಯರನ್ನು ಹೊಂದಿಸಲು ಆಯುಷ್ ಇಲಾಖೆ ಉದಾಸೀನ ತೋರಿಸುತ್ತಿದೆ. ಕರೋನ ಅವಧಿಯಲ್ಲಿ ಬಹುತೇಕ ಗೋಲ್ ಮಾಲ್ ಆಯುರ್ವೇದ ಔಷಧಿ ಕಂಪನಿಗಳ ಹಣೆ ಬರಹ ಬಯಲಾಗಿದ್ದು, ಬದಲಾಗುವ ಮೊದಲು ಕೋಟಿಗಟ್ಟಲೆ ಹಣ ಲೂಟಿ ಹೊಡೆದ ಕಂಪನಿಗಳು, ಜಾಹೀರಾತು ಮಾಡಿ ವಂಚಿಸುವ ವೈದ್ಯರು, ರಾಜ ಗುರುಗಳು, ವ್ಯವಸ್ಥಿತ ಆರ್ಥಿಕ ಲಾಭವನ್ನು ಕೊಡು, ಕೊಳ್ಳು ಮುಖಾಂತರ ಮಾಡಿಕೊಂಡು ಸೊಕ್ಕು ಮೆರೆದಿವೆ. ಗಂಡನ ಔಷಧ ಕಂಪನಿ, ಹೆಂಡತಿ ಆಯುಷ್ ಅಧಿಕಾರಿಯಾದಲ್ಲಿ ಟೆಂಡರ್ ಯಾಕೆ ಪಡೆಯಬಾರದು ಎನ್ನುವುದು ಜಿಲ್ಲಾ ಆಯುಷ್ ಅಧಿಕಾರಿ ಪ್ರಶ್ನೆ ಮಾಡಬೇಕಾದರೆ ಇಲಾಖೆ, ಜಿಲ್ಲಾಡಳಿತ, ಸರ್ಕಾರ ಯಾವ ರೀತಿ ಇಂತಹ ಖದೀಮ ಕಳ್ಳರ ಪರ ನಿಂತಿರಬಹುದು.
ಒಟ್ಟಾರೆ ಆಯುಷ್ ಇಲಾಖೆ ನಾಲಾಯಕ್ ಆಗಿದ್ದು, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲೇ ಇರಲು ಯೋಗ್ಯ ಎಂದು ಸರಕಾರ ಮನಗಾಣಬೇಕು. ಹಗರಣವೇ ಜೀವಾಳ ಮಾಡಿಕೊಂಡು ನನ್ನ ಜೊತೆಗೆ ನನಗೆ ಬೇಕಾದ ರಾಜಕಾರಣಿ ಇದ್ದಾರೆ. ನಾನು ಮಾಡಿದ್ದೇ ಸರಿ ಎನ್ನುವ ಅಧಿಕಾರಿಗಳ ಇನ್ನೂ ಒಂದಿಷ್ಟು ಜಾತಕ ಮುಂದಿನ ದಿನಗಳಲ್ಲಿ ಬಯಲಾಗಲಿದೆ.