ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಏಷ್ಯಾಕಪ್ ಫೈನಲ್ ಆಡುವುದನ್ನು ಖಚಿತ ಪಡಿಸಿಕೊಂಡಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭಾರತ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ ಗೆ 80 ರನ್ ಗಳ ಜೊತೆಯಾಟವಾಡಿದಾರು ಆದರೆ 12ನೇ ಓವರ್ನಲ್ಲಿ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಶುಭ್ಮನ್ ಗಿಲ್ (19) ರನ್ ವಿರಾಟ್ ಕೊಹ್ಲಿಯ (3) ರನ್ ರೋಹಿತ್ ಶರ್ಮಾ (53) ರನ್ ಕೆಎಲ್ ರಾಹುಲ್ (39) ರನ್ ಹಾರ್ದಿಕ್ ಪಾಂಡ್ಯ (5) ರನ್ ಈ ಮೂಲಕ ಕೇವಲ 40 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಸ್ಪಿನ್ನರ್ ಚರಿತ್ ಅಸಲಂಕಾ ಇಶಾನ್ ಕಿಶನ್ (33) ಹಾಗೂ ರವೀಂದ್ರ ಜಡೇಜಾ (5) ವಿಕೆಟ್ ಪಡೆದರು. ಅಲ್ಲದೆ ಒಟ್ಟು 4 ವಿಕೆಟ್ ಉರುಳಿಸುವ ಮೂಲಕ ಟೀಮ್ ಇಂಡಿಯಾ ಪಾಲಿಗೆ ಮಾರಕವಾಗಿ ಪರಿಣಮಿಸಿದರು. ಪರಿಣಾಮ 49.1 ಓವರ್ಗಳಲ್ಲಿ ಟೀಮ್ ಇಂಡಿಯಾ 213 ರನ್ ಗಳಿಸಿ ಆಲೌಟ್ ಆಯಿತು.
214 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ತಂಡ 10 ಓವರ್ ಬೌಲ್ ಮಾಡಿದ ಭಾರತದ ಸ್ಟಾರ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ರನ್ ಮೇಲೆ ಸಂಪೂರ್ಣ ಕಡಿವಾಣ ಹಾಕಿದರು. 10 ಓವರ್ ಆಗುವಷ್ಟರಲ್ಲಿ ಲಂಕಾ 3 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿತು. ಪಾತುಮ್ ನಿಸ್ಸಾಂಕ 6 ಮತ್ತು ಕುಸಾಲ್ ಮೆಂಡಿಸ್ 15 ರನ್ ಗೆ ಬುಮ್ರಾಗೆ ವಿಕೆಟ್ ಕೊಟ್ಟರೆ, 2 ರನ್ ಗಳಿಸಿದ್ದ ದಿಮುಕ ಕರುಣಾರತ್ನೆ ಅವರನ್ನು ಸಿರಾಜ್ ವಿಕೆಟ್ ಒಪ್ಪಿಸಿದ್ದಾರು .
ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕ ತಾಳ್ಮೆಯ ಆಟದ ಮೊರೆ ಹೋಗಿ ವಿಕೆಟ್ ಕಾಯ್ದುಕೊಂಡರು. ಕುಲದೀಪ್ 17 ರನ್ ಗಳಿಸಿ ಆಡುತ್ತಿದ್ದ ಸಮರವಿಕ್ರಮ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಚರಿತ್ (22) ವಿಕೆಟ್ ಅನ್ನೂ ಕುಲದೀಪ್ ವಿಕೆಟ್ ಪಡೆದರು.
ನಾಯಕ ದಸುನ್ ಶನಕಾ 9 ರನ್ ಗಳಿಸಿ ಜಡೇಜಾಗೆ ವಿಕೆಟ್ ಕೊಟ್ಟರು. ದನಂಜಯ್ ಡಿ ಸಿಲ್ವಾ ಮತ್ತು ದುನಿತ್ ವೆಲ್ಲಲಾಗೆ ಪಿಚ್ ಗೆ ಗಟ್ಟಿಯಾಗಿ ನಿಂತರು. ಇವರಿಬ್ಬರು ಭಾರತದ ಬೌಲರ್ ಗಳನ್ನು ಕಾಡಿದರು. ಅಲ್ಲದೇ, 7ನೇ ವಿಕೆಟ್ ಗೆ 63 ರನ್ ಜೊತೆಯಾಟ ನೀಡಿದರು. ಈ ನಡುವೆ 41 ರನ್ ಗಳಿಸಿ ಆಡುತ್ತಿದ್ದ ಡಿ ಸಿಲ್ವಾ ಅವರನ್ನು ಜಡೇಜಾ ಔಟ್ ಮಾಡಿದರು.
ಇದರ ಬೆನ್ನ್ಲಲೇ ಹಾರ್ದಿಕ್ ಪಾಂಡ್ಯ ಮಹೀಶ್ ವಿಕೆಟ್ ಪಡೆದರು, ಕುಲ್ದೀಪ್ ಯಾದವ್ ಕೊನೆಯ ಎರಡು ವಿಕೆಟ್ ಗಳನ್ನು ಪಡೆದರು. ಶ್ರೀಲಂಕಾ ತಂಡವು 41.3 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 41 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿತ್ತು.